ಶುಕ್ರನನ್ನ ಸಂಪತ್ತು ಹಾಗೂ ಸಂತೋಷದ ಗ್ರಹ ಎಂದು ಪರಿಗಣಿಸಲಾಗುತ್ತದೆ, ಈ ಶುಕ್ರದೆಸೆ ಯಾರಿಗೆ ಇರುತ್ತದೆಯೋ ಅವರ ಜೀವನದಲ್ಲಿ ಸೋಲು ಎನ್ನುವುದು ಇರುವುದಿಲ್ಲ. ಈ ಮಾರ್ಚ್ ತಿಂಗಳಿನಲ್ಲಿ ಕೆಲ ರಾಶಿಯವರಿಗೆ ಶುಕ್ರದೆಸೆ (Venus Transit) ಆರಂಭವಾಗಲಿದ್ದು, ಆ ಲಕ್ಕಿ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ವೃಷಭ ರಾಶಿ: ಶುಕ್ರನ ಕಾರಣದಿಂದ ಅದೃಷ್ಟ ಬರುತ್ತದೆ. ಅದೃಷ್ಟ ಹೆಚ್ಚಾಗುವುದರ ಜೊತೆಗೆ ನಿಮಗೆ ಆರ್ಥಿಕವಾಗಿ ಸಹ ಬಹಳ ಲಾಭವಾಗುತ್ತದೆ. ಈ ಸಮಯದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತದೆ. ಕಷ್ಟಗಳಿಂದ ಮುಕ್ತಿ ಸಿಗುತ್ತದೆ. ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಇದು ಬಹಳ ಉತ್ತಮವಾದ ಸಮಯವಾಗಿದ್ದು, ಬಹುವರ್ಷಗಳ ಕನಸು ನನಸಾಗುತ್ತದೆ ಎನ್ನಬಹುದು. ಅನಿರೀಕ್ಷಿತವಾಗಿ ನಿಮಗೆ ಆರ್ಥಿಕ ಲಾಭವಾಗುತ್ತದೆ. ಸಂಸಾರದಲ್ಲಿ ಸಹ ಸಂತೋಷ ಹೆಚ್ಚಿರುತ್ತದೆ.
ಕಟಕ ರಾಶಿ: ನಿಮ್ಮ ಹಳೆಯ ಕೆಲಸಗಳು ಮತ್ತೆ ಆರಂಭವಾಗಿ, ಅದರಿಂದ ಯಶಸ್ಸು ಹಾಗೂ ಆರ್ಥಿಕ ಲಾಭ 2 ಸಿಗುತ್ತದೆ. ಈ ಸಮಯದಲ್ಲಿ ನಿಮಗೆ ಸಾಲು ಸಾಲು ಅವಕಾಶಗಳು ಸಹ ಸಿಗುತ್ತದೆ. ಆತ್ಮವಿಶ್ವಾಸವು ಹೆಚ್ಚಾಗುತ್ತದೆ, ನೀವು ಪ್ರತಿ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ಮನೆಯಲ್ಲಿ ಸಹ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಇದು ನಿಮಗೆ ಬಹಳ ಮುಖ್ಯವಾದ ಸಮಯ ಎನ್ನಬಹುದು. ಜೀವನದಲ್ಲಿ ಕಷ್ಟಗಳು ಸಾಲಾಗಿ ಪರಿಹಾರವಾಗುತ್ತದೆ. ನೀವು ಹೊಸ ಯೋಜನೆಯನ್ನು ಪ್ರಾರಂಭಿಸಬಹುದಾಗಿದ್ದು, ಅದರಲ್ಲಿ ಸಹ ನಿಮಗೆ ಲಾಭ ಸಿಗುತ್ತದೆ.
ಕನ್ಯಾ ರಾಶಿ: ಈ ಸಮಯದ ನಿಮ್ಮ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತದೆ. ಮುಖ್ಯವಾಗಿ ನೀವು ಉನ್ನತ ಸ್ಥಾನಕ್ಕೆ ಏರಲು ಸಾಧ್ಯವಾಗುತ್ತದೆ. ಅಲ್ಲದೇ ಸಂಬಳದಲ್ಲಿ ಸಹ ಹೆಚ್ಚಳವಾಗುತ್ತದೆ. ಕೆಲಸಗಳು ಈಗ ಮತ್ತೆ ಆರಂಭವಾಗಲಿವೆ. ನಿಮ್ಮ ಕನಸು ನನಸಾಗಲಿದೆ. ಪ್ರತಿಯೊಂದು ವಿಚಾರದಲ್ಲೂ ಅದೃಷ್ಟ ನಿಮಗೆ ಸಿಗುತ್ತದೆ. ಸಾಲದ ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗುತ್ತದೆ. ಹಾಗೆಯೇ, ಅನಿರೀಕ್ಷಿತವಾಗಿ ಹಣ ಸಿಗುತ್ತದೆ. ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಇದು ಉತ್ತಮ ಸಮಯ.
ತುಲಾ ರಾಶಿ: ಆದಾಯದ ಮೂಲಗಳು ಹೆಚ್ಚಾಗಲಿವೆ. ಪೂರ್ವಜರ ಆಸ್ತಿಯಿಂದ ಲಾಭವಾಗುವ ಸಂಭವವಿದೆ. ಹೊಸ ಮನೆ ಅಥವಾ ವಾಹನ ಖರೀದಿಸುವ ಕನಸು ನನಸಾಗಬಹುದು. ನಿಮ್ಮ ಆರ್ಥಿಕ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳು ಬಗೆಹರಿಯಲಿವೆ.
