ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಫೆಬ್ರವರಿ ತಿಂಗಳಲ್ಲಿ ಗ್ರಹಗಳ ವಿಶೇಷ ಸಂಯೋಗ ನಡೆಯಲಿದೆ. ಮುಖ್ಯವಾಗಿ ಶನಿಯ ಕುಂಭ ರಾಶಿಯಲ್ಲಿ ಬುಧ, ಶುಕ್ರ, ಸೂರ್ಯ, ಮಂಗಳ ಹಾಗೂ ರಾಹು ಗ್ರಹದ ಸಂಯೋಗ ಆಗುತ್ತದೆ. ಒಂದೇ ರಾಶಿಯಲ್ಲಿ 5 ಗ್ರಹಗಳ ಸಂಯೋಗ ಆಗುವುದರಿಂದ ಪಂಚಗ್ರಾಹಿ (Panchagrahi Yoga) ಎನ್ನುವ ವಿಶೇಷ ಯೋಗ ರೂಪುಗೊಳ್ಳುತ್ತದೆ. ಈ ಯೋಗದ ಪರಿಣಾಮ ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ಇರುತ್ತದೆ. ಮಾರ್ಚ್ ತನಕ ಈ ಯೋಗದ ಪ್ರಭಾವ ಕೆಲ ರಾಶಿಯವರ ಮೇಲೆ ಆಗುತ್ತದೆ. ಹಾಗಾದ್ರೆ 5 ಗ್ರಹಗಳ ಈ ಸಂಯೋಗದಿಂದ ಕೆಲ ರಾಶಿಯವರಿಗೆ ಹಣ ಹಾಗೂ ಸಂತೋಷ ಹುಡುಕಿ ಬರುತ್ತದೆ. ಇದರಿಂದ ಅವರ ಜೀವನವೇ ಬದಲಾಗುತ್ತದೆ. ಆ ರಾಶಿಗಳು ಯಾವುವು ಎಂಬುದು ಇಲ್ಲಿದೆ.
ವೃಷಭ ರಾಶಿ: ಈ ರಾಶಿಯವರಿಗೆ ಬುಧ ಸಂಕ್ರಮಣ ಲಾಭದಾಯಕವಾಗಿರುತ್ತದೆ. ಉದ್ಯೋಗಿಗಳ ಸಂಬಳ ಹೆಚ್ಚಾಗಬಹುದು. ಈ ಸಮಯದಲ್ಲಿ ನೀವು ಹಣದ ವಿಷಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನೀವು ಯಾವುದೇ ವಿವಾದದಲ್ಲಿ ಭಾಗಿಯಾಗಿದ್ದರೆ, ಚಿಂತಿಸಬೇಡಿ, ನಿಮ್ಮ ಪರವಾಗಿ ಅದು ಬದಲಾಗಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಜನರು ಹೊಸ ಹೊಸ ಅವಕಾಶವನ್ನು ಪಡೆಯುತ್ತಾರೆ.
ಸಿಂಹ ರಾಶಿ: ಈ ಗ್ರಹಗಳ ಸಂಯೋಗ ನಿಮಗೆ ಯಶಸ್ಸು ಹೆಚ್ಚಿಸಲಿದೆ. ಈ ಸಮಯದಲ್ಲಿ ವ್ಯವಹಾರದಲ್ಲಿ ಗಣನೀಯ ಯಶಸ್ಸು ಇರುತ್ತದೆ. ಲಾಭ ಪಡೆಯಲು ಉತ್ತಮ ಅವಕಾಶಗಳು ದೊರೆಯಲಿವೆ. ಇದು ನಿಮ್ಮ ಆರ್ಥಿಕ ಸ್ಥಿತಿ ಬದಲಾಗುತ್ತದೆ. ಉದ್ಯೋಗಸ್ಥರು ತಮ್ಮ ಕೆಲಸದಲ್ಲಿ ವಿಶ್ವಾಸವನ್ನು ಗಳಿಸುತ್ತಾರೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಸ್ಥಿತಿಯು ಮೊದಲಿಗಿಂತ ಉತ್ತಮವಾಗಿರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ವೃಶ್ಚಿಕ ರಾಶಿ: ಪಂಚಗ್ರಾಹಿ ಯೋಗವು ನಿಮ್ಮ ರಾಶಿಯ ಜನರಿಗೆ ಸಂಪೂರ್ಣ ಲಾಭ ನೀಡುತ್ತದೆ. ಉದ್ಯೋಗಿಗಳಿಗೆ ಒಳ್ಳೆಯ ದಿನಗಳು ಬರಲಿವೆ. ಜೀವನದಲ್ಲಿ ಪ್ರಗತಿ ಇರುತ್ತದೆ ಮತ್ತು ಆರ್ಥಿಕ ಸ್ಥಿತಿ ಸಹ ಬಲವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ವ್ಯಾಪಾರದಲ್ಲಿ ಹೂಡಿಕೆ ಲಾಭದಾಯಕವಾಗಲಿದೆ.
ಕುಂಭ ರಾಶಿ: ನಿಮ್ಮ ಆದಾಯವನ್ನು ಹೆಚ್ಚಿಸುತ್ತದೆ. ಆದಾಯ ಹೆಚ್ಚಳದಿಂದ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಯಶಸ್ಸನ್ನು ಪಡೆಯುತ್ತಾರೆ. ವ್ಯವಹಾರದಲ್ಲಿ ಇಟ್ಟ ಹೆಜ್ಜೆ ಯಶಸ್ಸನ್ನು ತರುತ್ತದೆ. ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.
ಇದನ್ನೂ ಓದಿ: ಮನೆಯಲ್ಲಿ ಈ ತಿಂಗಳು ಬರೀ ಸಮಸ್ಯೆ, ಕಿರಿಕಿರಿ ಮುಗಿಯೋದೇ ಇಲ್ಲ
