Orange: ಚರ್ಮದ ಕಾಂತಿ ಹೆಚ್ಚು ಮಾಡುತ್ತೆ ಈ ಹಣ್ಣು, ಕಿತ್ತಳೆ ತಿಂದ್ರೆ ಮಾಯವಾಗುತ್ತೆ ಜ್ವರ

health benefits of seasonal fruit Orange

ಕಿತ್ತಳೆ ಹಣ್ಣು ಬಹಳಷ್ಟು ಜನರ ಫೇವರೇಟ್‌ ಎನ್ನಬಹುದು. ಅದನ್ನ ಬಿಡಿಸೋದು ಬಹಳ ಸುಲಭ ಹಾಗೂ ರುಚಿಕರ ಕೂಡ ಹೌದು. ಅದರ ಜೊತೆಗೆ ಈ ಕಿತ್ತಳೆ ಹಣ್ಣು ತುಂಬಾ ಆರೋಗ್ಯಕರ ಕೂಡ ಹೌದು. ಕಿತ್ತಳೆ ಹಣ್ಣು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಹಣ್ಣುಗಳಲ್ಲಿ ಒಂದಾಗಿದೆ., ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೆಚ್ಚು ವಿಟಮಿನ್ ಸಿ ಮತ್ತು ಸಿಟ್ರಸ್ ಹಣ್ಣುಗಳನ್ನು ಸೇವನೆ ಮಾಡಬೇಕು ಎನ್ನಲಾಗುತ್ತದೆ. ಅದಕ್ಕೆ ಈ ಕಿತ್ತಳೆ ಹಣ್ಣು (Orange) ಹೆಚ್ಚು ಸೂಕ್ತ. ಹಾಗಾದ್ರೆ ಕಿತ್ತಳೆ ತಿನ್ನುವುದರಿಂದಾಗುವ ಆರೋಗ್ಯ ಪ್ರಯೋಜನಗಳೇನು ಎಂಬುದು ಇಲ್ಲಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ

ಕಿತ್ತಳೆ ಹಣ್ಣಿನಲ್ಲಿಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನ ಹೊಂದಿದೆ, ಇದನ್ನ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ದೇಹವು ರೋಗದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕಿತ್ತಳೆ ಹಣ್ಣುಗಳನ್ನು ವಿಟಮಿನ್ ಸಿ ಯ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ, ಇದು ಆರೋಗ್ಯಕರ ಕೋಶಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

ಚರ್ಮದ ಆರೋಗ್ಯಕ್ಕೆ ಉತ್ತಮ
ಕಿತ್ತಳೆ ಹಣ್ಣು ತಿನ್ನುವುದರಿಂದ ಚರ್ಮ ರೋಗಗಳ ಅಪಾಯ ಕಡಿಮೆಯಾಗುತ್ತದೆ. ಮುಖ್ಯವಾಗಿ ಇದನ್ನ ತಿನ್ನುವುದರಿಂದ ಚರ್ಮಕ್ಕೆ ಕಳೆ ಸಹ ಬರುತ್ತದೆ.   ಕಿತ್ತಳೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ,

ರಕ್ತಹೀನತೆಗೆ ಉತ್ತಮ ಪರಿಹಾರ ಈ ಹಣ್ಣು
ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆಗೆ ಈ ಹಣ್ಣು ಪರಿಹಾರ ಎನ್ನಲಾಗುತ್ತದೆ. ಮುಖ್ಯವಾಗಿ ಕಬ್ಬಿಣ್ಣದ ಕೊರತೆಯಿಂದ ರಕ್ತ ಹೀನತೆ ಆಗುತ್ತದೆ. ವಿಟಮಿನ್ ಸಿ ಕಬ್ಬಿಣವನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತ ಹೀನತೆ ಆಗದಂತೆ ತಡೆಯಬಹುದು.

ಇದನ್ನೂ ಓದಿ: ಮಲೈ ಕುಟ್ಟು ಭಲ್ಲಾ ಟ್ರೈ ಮಾಡಿದ್ದೀರಾ? ಮಿಸ್‌ ಮಾಡದೇ ಟ್ರೈ ಮಾಡಿ

Leave a Reply

Your email address will not be published. Required fields are marked *