TOP NEWS

Madhu Bangarappa: 12.5 ಲಕ್ಷ ಮಕ್ಕಳಿಗೆ ಶೂ ವಿತರಣೆ: ಗುಣಮಟ್ಟದಲ್ಲಿ ರಾಜಿ ಇಲ್ಲ ಎಂದ ಸಚಿವರು

Viral Photos of Poor Quality Shoes Are From Last Year Clarifies Education Minister Madhu Bangarappa

ಬೆಂಗಳೂರು: ರಾಜ್ಯದ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಶೂಗಳ ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಖಡಕ್ ಸ್ಪಷ್ಟನೆ ನೀಡಿದ್ದಾರೆ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕಳಪೆ ಶೂಗಳ ಫೋಟೋಗಳು ಈ ಸಾಲಿನದ್ದಲ್ಲ, ಬದಲಾಗಿ ಕಳೆದ ವರ್ಷದ ಹಳೆಯ ಶೂಗಳದ್ದಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಳಂಬವನ್ನ ಒಪ್ಪಿಕೊಂಡ ಸಚಿವರು

ಈ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರಾಜ್ಯಾದ್ಯಂತ ಹನ್ನೆರಡೂವರೆ ಲಕ್ಷ ವಿದ್ಯಾರ್ಥಿಗಳಿಗೆ ಶೂಗಳನ್ನು ವಿತರಿಸಲಾಗುತ್ತಿದೆ. ಈ ಪೂರೈಕೆ ಪ್ರಕ್ರಿಯೆಯಲ್ಲಿ ಸಣ್ಣಮಟ್ಟದ ವಿಳಂಬವಾಗಿರುವುದನ್ನು ಸಚಿವರು ಒಪ್ಪಿಕೊಂಡರೂ, ಗುಣಮಟ್ಟದ ವಿಚಾರದಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಕೆಲವು ಕಡೆಗಳಲ್ಲಿ ಗಾತ್ರ ಸರಿಯಿಲ್ಲದೆ ಮಕ್ಕಳಿಗೆ ಶೂ ಬಿಗಿಯಾಗುತ್ತಿರುವ ದೂರುಗಳು ಬಂದಿದ್ದು, ಅಂತಹ ಕಡೆ ತಕ್ಷಣವೇ ಶೂಗಳನ್ನು ವಿನಿಮಯ ಮಾಡಿಕೊಡಲು ವ್ಯವಸ್ಥೆ ಕಲ್ಪಿಸಲಾಗಿದೆ. ನಿರ್ದಿಷ್ಟವಾಗಿ ಕಳಪೆ ಶೂ ಪೂರೈಕೆಯಾಗಿರುವ ಬಗ್ಗೆ ದೂರುಗಳು ಕಂಡುಬಂದರೆ, ಟೆಂಡರ್ ಪಡೆದ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಚುನಾವಣಾ ಆಯೋಗದ ವಿರುದ್ದ ಮಧು ಬಂಗಾರಪ್ಪ ಕಿಡಿ

ಇದೇ ವೇಳೆ, ಶಾಲಾ ಶಿಕ್ಷಕರನ್ನು ಚುನಾವಣಾ ಆಯೋಗದ ಎಸ್​ಐಆರ್ ಕಾರ್ಯಕ್ಕೆ ನಿರಂತರವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಸಚಿವರು ತೀವ್ರ ಕಳವಳ ವ್ಯಕ್ತಪಡించారు. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಕ್ಷಕರು ಅತ್ಯಂತ ಸಹಕಾರ ನೀಡಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಆದರೆ ಅವರನ್ನು ಬೋಧನಾ ಕಾಯಕದಿಂದ ಹೊರತಂದು ಎಸ್​ಐಆರ್ ಕೆಲಸಗಳಿಗೆ ನಿಯೋಜಿಸುತ್ತಿರುವುದರಿಂದ ಮಕ್ಕಳಿಗೆ ಅಪಾರ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈ ವಿಷಯದಲ್ಲಿ ಚುನಾವಣಾ ಆಯೋಗವು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದೆ ಎಂದು ಸಚಿವ ಮಧು ಬಂಗಾರಪ್ಪ ನೇರ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕೆಪಿಎಸ್‌ಸಿ ಹಗರಣ ಬಯಲಾದರೆ ಕೆಲ ಸಚಿವರು ಜೈಲಿಗೆ: ವಿಧಾನ ಪರಿಷತ್ತಿನಲ್ಲಿ ಛಲವಾದಿ ನಾರಾಯಣಸ್ವಾಮಿ ಬಾಂಬ್

Leave a Reply

Your email address will not be published. Required fields are marked *