TOP NEWS

Rachita Ram: ಅಭಿಮಾನಿಗಳ ಜೊತೆ 33ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಚಿತಾ ರಾಮ್: ಸೆಲ್ಫಿ ವೇಳೆ ಅನಿರೀಕ್ಷಿತ ಘಟನೆ!

Unplanned Incident at Rachita Ram s Birthday Fan Cheek Pinch Moment Goes Viral

ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ, ‘ಡಿಂಪಲ್ ಕ್ವೀನ್’ ರಚಿತಾ ರಾಮ್ (Rachita Ram) ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ವಿಶೇಷ ದಿನವನ್ನು ತಮ್ಮ ನೆಚ್ಚಿನ ಅಭಿಮಾನಿಗಳ ಸಮ್ಮುಖದಲ್ಲಿ ಅತ್ಯಂತ ಸಡಗರದಿಂದ ಆಚರಿಸಿಕೊಂಡಿದ್ದಾರೆ. ಬರ್ತ್‌ಡೇ ಅಂಗವಾಗಿ ರಾಜರಾಜೇಶ್ವರಿನಗರದಲ್ಲಿರುವ ಅವರ ನಿವಾಸದ ಮುಂದೆ ಮಧ್ಯರಾತ್ರಿಯೇ ನೂರಾರು ಅಭಿಮಾನಿಗಳು ಜಮಾಯಿಸಿದ್ದು, ರಚಿತಾ ರಾಮ್ ಬೃಹತ್ ಕೇಕ್ ಕತ್ತರಿಸುವ ಮೂಲಕ ಬರ್ತ್‌ಡೇ ಸಂಭ್ರಮವನ್ನು ಹಂಚಿಕೊಂಡರು.

ನಟಿಯ ಕೆನ್ನೆ ಚಿವುಟಿದ ಅಭಿಮಾನಿ

ಮಧ್ಯರಾತ್ರಿಯಿಂದಲೇ ನೆರೆದಿದ್ದ ಅಭಿಮಾನಿಗಳಿಗೆ ಕಿಂಚಿತ್ತೂ ಬೇಸರವಾಗದಂತೆ ಪ್ರತಿಯೊಬ್ಬರೊಂದಿಗೂ ನಗುಮುಖದಿಂದಲೇ ಮಾತನಾಡಿದ ರಚಿತಾ ರಾಮ್, ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಕ್ತ ಅವಕಾಶ ಮಾಡಿಕೊಟ್ಟಿದ್ದರು. ಈ ವೇಳೆ ವಿಚಿತ್ರ ಘಟನೆಯೊಂದು ನಡೆದಿದ್ದು, ಸೆಲ್ಫಿ ಪಡೆಯಲು ಹತ್ತಿರ ಬಂದ ಅಭಿಮಾನಿಯೊಬ್ಬ ಫೋಟೋ ತೆಗೆದುಕೊಂಡ ಬಳಿಕ ದಿಢೀರನೆ ನಟಿ ರಚಿತಾ ರಾಮ್ ಅವರ ಕೆನ್ನೆ ಚಿವುಟಿದ್ದಾನೆ. ಈ ಅನಿರೀಕ್ಷಿತ ಘಟನೆಯಿಂದ ಕ್ಷಣಕಾಲ ತೀವ್ರ ಆಘಾತಕ್ಕೊಳಗಾದ ನಟಿ ರಚಿತಾ ರಾಮ್, ನಂತರ ತುಸು ಅಸಮಾಧಾನ ಹಾಗೂ ಕೋಪದ ನಗೆಯೊಂದಿಗೆ ಪರಿಸ್ಥಿತಿಯನ್ನು ತಿಳಿಗೊಳಿಸಿ ಸುಮ್ಮನಾಗಿದ್ದಾರೆ. ಈ ಇಡೀ ಸನ್ನಿವೇಶದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ವೈರಲ್ ಆಗುತ್ತಿದೆ. ವಿಡಿಯೋ ವೀಕ್ಷಿಸಿದ ಅಭಿಮಾನಿಗಳು “ನಮ್ಮ ಡಿಂಪಲ್ ಕ್ವೀನ್ ಕೋಪದಲ್ಲೂ ಅತ್ಯಂತ ಮುದ್ದಾಗಿ ಕಾಣಿಸುತ್ತಾರೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್ ಮಾಡುವ ಮೂಲಕ ನಟಿಗೆ ಶುಭಾಶಯಗಳ ಸುರಿಮಳೆ ಗೈಯುತ್ತಿದ್ದಾರೆ.

ದರ್ಶನ್‌ ನೆನೆದು ಭಾವುಕರಾದ ರಚಿತಾ

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೆನಪಿಸಿಕೊಂಡ ನಟಿ ರಚಿತಾ ರಾಮ್ ತೀವ್ರ ಭಾವುಕರಾದರು. ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ನಟ ದರ್ಶನ್ ಅವರ ಆಶೀರ್ವಾದ ಪಡೆಯಲು ತಾನು ತೆರಳಿದ್ದಾಗಿ ತಿಳಿಸಿದ ಅವರು, ಕಾರಾಗೃಹದ ನಿಯಮಾವಳಿ ಪ್ರಕಾರ ವಾರಕ್ಕೆ ಕೇವಲ ಎರಡು ಭೇಟಿಗಳಿಗೆ ಮಾತ್ರ ಅವಕಾಶವಿತ್ತು. ದರ್ಶನ್ ಅವರ ಕುಟುಂಬದ ಸದಸ್ಯರು ಭೇಟಿಯಾಗಬೇಕಿದ್ದ ಕಾರಣ ತಮಗೆ ಮುಖಾಮುಖಿ ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ಕಾದಿದ್ದರೂ ಭೇಟಿ ಸಾಧ್ಯವಾಗದೆ ವಾಪಸ್ ಬರಬೇಕಾಯಿತು, ಆದಾಗ್ಯೂ ದರ್ಶನ್ ಅವರ ಆಶೀರ್ವಾದ ಸದಾ ತಮ್ಮ ಮೇಲಿರುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವುದಾಗಿ ರಚಿತಾ ರಾಮ್ ಭರವಸೆಯ ಮಾತುಗಳನ್ನಾಡಿದರು.

ಇದನ್ನೂ ಓದಿ:  ಪ್ರಿಯಾಂಕಾ – ಸೈಫ್ ಜುಗಲ್ಬಂದಿ: ಗ್ಲೋಬಲ್ ಸಿನಿಮಾಗೆ ರಿತೇಶ್ ಬತ್ರಾ ಪ್ಲಾನ್!

Leave a Reply

Your email address will not be published. Required fields are marked *