Rachita Ram: ಅಭಿಮಾನಿಗಳ ಜೊತೆ 33ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಚಿತಾ ರಾಮ್: ಸೆಲ್ಫಿ ವೇಳೆ ಅನಿರೀಕ್ಷಿತ ಘಟನೆ!
ಬೆಂಗಳೂರು: ಸ್ಯಾಂಡಲ್‌ವುಡ್‌ನ ಜನಪ್ರಿಯ ನಟಿ, ‘ಡಿಂಪಲ್ ಕ್ವೀನ್’ ರಚಿತಾ ರಾಮ್ (Rachita Ram) ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ವಿಶೇಷ ದಿನವನ್ನು ತಮ್ಮ ನೆಚ್ಚಿನ ಅಭಿಮಾನಿಗಳ ಸಮ್ಮುಖದಲ್ಲಿ ಅತ್ಯಂತ ಸಡಗರದಿಂದ ಆಚರಿಸಿಕೊಂಡಿದ್ದಾರೆ. ಬರ್ತ್‌ಡೇ ಅಂಗವಾಗಿ ರಾಜರಾಜೇಶ್ವರಿನಗರದಲ್ಲಿರುವ ಅವರ ನಿವಾಸದ ಮುಂದೆ ಮಧ್ಯರಾತ್ರಿಯೇ ನೂರಾರು ಅಭಿಮಾನಿಗಳು ಜಮಾಯಿಸಿದ್ದು, ರಚಿತಾ ರಾಮ್ ಬೃಹತ್ ಕೇಕ್ ಕತ್ತರಿಸುವ ಮೂಲಕ ಬರ್ತ್‌ಡೇ ಸಂಭ್ರಮವನ್ನು ಹಂಚಿಕೊಂಡರು. ನಟಿಯ ಕೆನ್ನೆ ಚಿವುಟಿದ ಅಭಿಮಾನಿ ಮಧ್ಯರಾತ್ರಿಯಿಂದಲೇ ನೆರೆದಿದ್ದ ಅಭಿಮಾನಿಗಳಿಗೆ ಕಿಂಚಿತ್ತೂ ಬೇಸರವಾಗದಂತೆ ಪ್ರತಿಯೊಬ್ಬರೊಂದಿಗೂ ನಗುಮುಖದಿಂದಲೇ ಮಾತನಾಡಿದ…
