Crime: ಯಾದಗಿರಿ ಸಹಕಾರಿ ಬ್ಯಾಂಕ್ ಹಗರಣಕ್ಕೆ ದುರಂತ ಅಂತ್ಯ: ಅಧ್ಯಕ್ಷ ಬಸನಗೌಡ ಆತ್ಮಹತ್ಯೆ!
ಯಾದಗಿರಿ: ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದ್ದ ಕೋಟ್ಯಂತರ ರೂಪಾಯಿ ಆರ್ಥಿಕ ಹಗರಣವು ಇದೀಗ ದುರಂತ ಅಂತ್ಯ (Crime) ಕಂಡಿದೆ. ಶಹಾಪುರ ನಗರದ ಮಾತೋಶ್ರೀ ಹೇಮರಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಬಸನಗೌಡ ವೆಂಕಟರೆಡ್ಡಿ ಮಾಲಿ ಪಾಟೀಲ (64) ಅವರು ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ಸಾಲದ ಅಕ್ರಮ ಹಾಗೂ ಗ್ರಾಹಕರ ಆಕ್ರೋಶವೇ ಈ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು, ಜಿಲ್ಲಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಏನಿದು ಪ್ರಕರಣ? ಮಾತೋಶ್ರೀ ಹೇಮರಡ್ಡಿ…
