VS Ugrappa: ಚಿತ್ರದುರ್ಗದಲ್ಲಿ ವಿ.ಎಸ್. ಉಗ್ರಪ್ಪ ರೋಷಾವೇಷ: ನಟ ಕಿಚ್ಚ ಸುದೀಪ್ ವಿರುದ್ಧ ಗುಡುಗಿ ಮೀಸಲಾತಿ ಹೋರಾಟಕ್ಕೆ ಕರೆ!
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ವಿಜೃಂಭಣೆಯಿಂದ ನಡೆದ ಮದಕರಿನಾಯಕರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿ.ಎಸ್. ಉಗ್ರಪ್ಪ (VS Ugrappa) ಅವರು ಅತ್ಯಂತ ರೋಷಾವೇಷದ ಭಾಷಣ ಮಾಡಿದ್ದು, ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದಾರೆ. ನಾಯಕ ಸಮುದಾಯಕ್ಕೆ ಸೇರಿರುವ ಸುದೀಪ್ ಅವರು ಕೇವಲ ಅಭಿಮಾನಿಗಳಿಂದ ಕೇಕೆ ಮತ್ತು ಶಿಳ್ಳೆ ಗಿಟ್ಟಿಸಿಕೊಳ್ಳುವುದಕ್ಕೆ ಸೀಮಿತವಾಗದೆ, ಸಮುದಾಯದ ಏಳಿಗೆ ಹಾಗೂ ಮೀಸಲಾತಿ ಹೋರಾಟಕ್ಕಾಗಿ ಬೀದಿಗೆ ಇಳಿಯಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ನಟ ಕಿಚ್ಚ ಸುದೀಪ್‌ಗೆ ನೇರ ಸವಾಲು…
