Vinod Kambli: ವಿನೋದ್ ಕಾಂಬ್ಳೆಗೆ ಕಾಡುತ್ತಿದೆಯಂತೆ ಈ ರೋಗ
ಮುಂಬೈ: ಭಾರತೀಯ ಕ್ರಿಕೆಟ್‌ನ ಹಿರಿಯ ಆಟಗಾರ ವಿನೋದ್ ಕಾಂಬ್ಳೆ (Vinod Kambli) ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಸದ್ಯ ಅವರು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ (Brain Clot) ಸಮಸ್ಯೆಯಿಂದ ಬಳಲುತ್ತಿದ್ದು, ಮುಂದಿನ ದಿನಗಳಲ್ಲಿ ಪಾರ್ಶ್ವವಾಯು (Brain Stroke) ಸಂಭವಿಸುವ ಅಪಾಯವಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಈ ಆತಂಕಕಾರಿ ವಿಷಯವನ್ನು ಅವರ ಆಪ್ತ ಗೆಳೆಯ ಮಾರ್ಕಸ್ ಕೌಟೊ ಬಹಿರಂಗಪಡಿಸಿದ್ದಾರೆ. ಮರೆಯಾಗುತ್ತಿದೆ ನೆನಪಿನ ಶಕ್ತಿ: ಕಳೆದ ವರ್ಷದಿಂದ ಅನಾರೋಗ್ಯಕ್ಕೆ ತುತ್ತಾಗಿರುವ ಕಾಂಬ್ಳೆ ಅವರಿಗೆ ನೆನಪಿನ ಶಕ್ತಿ ಕುಂದುತ್ತಿದ್ದು, ದೇಹದ…
