Solar Cap: ಬೆಳಗಾವಿ ಬಿಸಿಲಿಗೆ ಪೊಲೀಸ್ ಹೈಟೆಕ್ ಮೊರೆ: ಸೋಲಾರ್ ಟೋಪಿ ಧರಿಸಿ ಟ್ರಾಫಿಕ್ ಸಿಬ್ಬಂದಿ ಕರ್ತವ್ಯ
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರುತ್ತಿದ್ದು, ಸಾರ್ವಜನಿಕರು ಹೈರಾಣಾಗಿದ್ದಾರೆ. ಕಳೆದ 15 ದಿನಗಳಿಂದ ಇಲ್ಲಿನ ತಾಪಮಾನ 36 ರಿಂದ 39 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಇಂತಹ ಸುಡುವ ಬಿಸಿಲಿನಲ್ಲಿ ರಸ್ತೆಯ ಮಧ್ಯೆ ನಿಂತು ದಣಿವರಿಯದೆ ಕೆಲಸ ಮಾಡುವ ಸಂಚಾರಿ ಪೊಲೀಸರ ಕಷ್ಟ ಹೇಳತೀರದು. ಆದರೆ, ಬೆಳಗಾವಿಯ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ಈ ಬಿಸಿಲಿನಿಂದ ಪಾರಾಗಲು ಕಂಡುಕೊಂಡಿರುವ ‘ಸೋಲಾರ್ ಕ್ಯಾಪ್’ (Solar Cap) ಉಪಾಯ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಟೋಪಿ ಮೇಲೆ ಸೋಲಾರ್…
