Shashi Tharoor: ಬಿಜೆಪಿಯ ಚುನಾವಣಾ ತಂತ್ರಗಾರಿಕೆಗೆ ಶಶಿ ತರೂರ್ ಮೆಚ್ಚುಗೆ: ಕಾಂಗ್ರೆಸ್‌ನಲ್ಲಿ ಆತ್ಮಾವಲೋಕನಕ್ಕೆ ಕರೆ!
ನವದೆಹಲಿ: ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ದಾಖಲಿಸಿರುವ ಅಭೂತಪೂರ್ವ ಗೆಲುವಿನ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಕಾರ್ಯವೈಖರಿಯನ್ನು ಕಾಂಗ್ರೆಸ್ ಮುಖಂಡ ಶಶಿ ತರೂರ್ (Shashi Tharoor) ಶ್ಲಾಘಿಸಿದ್ದಾರೆ. ಎದುರಾಳಿ ಪಕ್ಷದ ಯಶಸ್ವಿ ಮ್ಯಾನೇಜ್‌ಮೆಂಟ್ ಕುರಿತು ಅವರು ನೀಡಿರುವ ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ವೃತ್ತಿಪರ ಸಂಘಟನೆಗೆ ಸಂದ ಜಯ: ಬಿಜೆಪಿಯ ಚುನಾವಣಾ ನಿರ್ವಹಣೆಯ ಬಗ್ಗೆ ಮಾತನಾಡಿದ ತರೂರ್, “ನರೇಂದ್ರ ಮೋದಿ ಮತ್ತು ಅಮಿತ್…
