Scam: ವಿಎಸ್‌ಕೆ ವಿವಿ ನಕಲಿ ಸರ್ಟಿಫಿಕೇಟ್ ಹಾಗೂ ದುಡ್ಡಿಗೆ ಪಾಸ್ ಹಗರಣ: ಇಬ್ಬರ ವಿರುದ್ಧ ಎಫ್‌ಐಆರ್
ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ (VSKUB) ಒಳಾಂಗಣದಲ್ಲಿ ಬೇರುಬಿಟ್ಟಿದ್ದ ನಕಲಿ ಪ್ರಮಾಣಪತ್ರ ದಂಧೆ ಹಾಗೂ ಹಣ ಪಡೆದು (Scam) ವಿದ್ಯಾರ್ಥಿಗಳನ್ನು ಪಾಸ್ ಮಾಡಿಸುತ್ತಿದ್ದ ಬೃಹತ್ ಅಕ್ರಮ ಜಾಲ ಕೊನೆಗೂ ಪೋಲೀಸ್ ಠಾಣೆಯ ಮೆಟ್ಟಿಲೇರಿದೆ. ವಿಶ್ವವಿದ್ಯಾಲಯದ ಘನತೆಗೆ ಮಸಿ ಬಳಿದಿದ್ದ ಈ ಹಗರಣ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಆಡಳಿತ ಮಂಡಳಿ, ಇಬ್ಬರು ಹೊರಗುತ್ತಿಗೆ ನೌಕರರ ವಿರುದ್ಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ (FIR) ದಾಖಲಿಸಿದೆ. ವಿಶ್ವವಿದ್ಯಾಲಯದ ದೂರಿನನ್ವಯ ಇಬ್ಬರ ಮೇಲೆ ಎಫ್‌ಐಆರ್…
