Pooja Hegde: ಕರಾವಳಿ ಚೆಲುವೆ ಪೂಜಾ ಹೆಗ್ಡೆಗೆ ರಾಜ್ ಬಿ ಶೆಟ್ಟಿ ನಟನೆ ಅಂದ್ರೆ ಪಂಚಪ್ರಾಣ: ಮಂಗಳೂರಿನಲ್ಲಿ ನಟಿ ಮನದಾಳದ ಮಾತು
ಮಂಗಳೂರು: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ಪೂಜಾ ಹೆಗ್ಡೆ,(Pooja Hegde) ತಾವು ಎಷ್ಟೇ ಎತ್ತರಕ್ಕೆ ಬೆಳೆದರೂ ತಮ್ಮ ಹುಟ್ಟೂರಾದ ಕರಾವಳಿಯ ಸಂಸ್ಕೃತಿಯನ್ನು ಮರೆತಿಲ್ಲ. ಮುಂಬೈನಲ್ಲಿ ನೆಲೆಸಿದ್ದರೂ ತುಳುನಾಡಿನ ಮಣ್ಣಿನ ನಂಟು ಹೊಂದಿರುವ ಈ ನಟಿ, ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿ ದೈವಾರಾಧನೆ ಮತ್ತು ದೇವಸ್ಥಾನಗಳ ದರ್ಶನ ಪಡೆದರು. ಈ ಸಂದರ್ಭದಲ್ಲಿ ಅವರು ಕನ್ನಡ ಚಿತ್ರರಂಗದ ಬಗ್ಗೆ ತಮ್ಮ ಅಭಿಮಾನವನ್ನು ಹಂಚಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿ ಇಷ್ಟ ಎಂದ ನಟಿ ಕನ್ನಡದ ಸಿನಿಮಾಗಳಲ್ಲಿ ತಮ್ಮ ನೆಚ್ಚಿನ…
