Pahalgam: ಪಹಲ್ಗಾಮ್ ಉಗ್ರರ ದಾಳಿ ತನಿಖೆಯಲ್ಲಿ ಬಿಗ್ ಬ್ರೇಕ್‌ಥ್ರೂ: ಕರಾಚಿ ಇಸ್ಲಾಮಿಕ್ ಬ್ಯಾಂಕ್ ಲಿಂಕ್ ಬಯಲು ಮಾಡಿದ ಭದ್ರತಾ ಪಡೆಗಳು!
ನವದೆಹಲಿ: ಕಳೆದ 2025ರಲ್ಲಿ ಜಮ್ಮು ಮತ್ತು ಕಾಶ್ಮೀರದ ನಿಸರ್ಗ ರಮಣೀಯ ಪಹಲ್ಗಾಮ್‌ನಲ್ಲಿ (Pahalgam ) ನಡೆದ ಭೀಕರ ಉಗ್ರರ ದಾಳಿಯ ತನಿಖೆ ನಡೆಸುತ್ತಿರುವ ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಜಮ್ಮು-ಕಾಶ್ಮೀರ ಪೊಲೀಸರಿಗೆ ಅತ್ಯಂತ ಪ್ರಮುಖವಾದ ತಾಂತ್ರಿಕ ಪುರಾವೆಗಳು ಲಭ್ಯವಾಗಿವೆ. ದಾಳಿ ನಡೆಸಿದ ಉಗ್ರರಿಂದ ವಶಪಡಿಸಿಕೊಳ್ಳಲಾದ ಎರಡು ಮೊಬೈಲ್ ಫೋನ್‌ಗಳ ಪೈಕಿ ಒಂದು ಫೋನ್, 2021ರಲ್ಲಿ ಪಾಕಿಸ್ತಾನಕ್ಕೆ ಆಮದು ಮಾಡಿಕೊಳ್ಳಲಾದ ದೊಡ್ಡ ಕನ್ಸೈನ್‌ಮೆಂಟ್‌ಗೆ ಸೇರಿದ್ದಾಗಿದೆ. ಅಚ್ಚರಿಯ ವಿಷಯವೆಂದರೆ, ಈ ಮೊಬೈಲ್ ಸಾಗಣೆಗೆ ಕರಾಚಿ ಮೂಲದ ಫೈಸಲ್ ಬ್ಯಾಂಕ್…
