New Car: ಬರಗಾಲ, ಆರ್ಥಿಕ ಸಂಕಷ್ಟದ ನಡುವೆ ಹೊಸ ಕಾರುಗಳ ಖರೀದಿ: ಡಿಸಿಎಂ ಪರಮೇಶ್ವರ್ ಹೊಸ ಫಾರ್ಚುನರ್‌ನಲ್ಲಿ ಸವಾರಿ!
ಬೆಂಗಳೂರು: ರಾಜ್ಯದಲ್ಲಿ ಬರಗಾಲದ ಛಾಯೆ ಇರುವ ನಡುವೆಯೇ ಸಚಿವರು, ಸಂಸದರು (New Car) ಹಾಗೂ ಅಧಿಕಾರಿಗಳಿಗೆ ಹೊಸ ವಾಹನಗಳನ್ನು ಖರೀದಿಸಿ ಹಂಚಿಕೆ ಮಾಡುತ್ತಿರುವ ಕ್ರಮ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ. ವಾಹನ ಖರೀದಿಯ ಗರಿಷ್ಠ ವೆಚ್ಚದ ಮಿತಿಯನ್ನು ಸರ್ಕಾರ ಕಳೆದ ತಿಂಗಳು 26 ಲಕ್ಷ ರೂಪಾಯಿಯಿಂದ 31 ಲಕ್ಷ ರೂಪಾಯಿಗೆ ಏರಿಕೆ ಮಾಡಿದ್ದು, ಅದರ ಬೆನ್ನಲ್ಲೇ ಹೊಸ ಕಾರುಗಳ ವಿತರಣೆ ಪ್ರಕ್ರಿಯೆ ನಡೆದಿದೆ. ಹೊಸ ಫಾರ್ಚುನರ್ ಕಾರಿನಲ್ಲಿ ಡಾ. ಜಿ. ಪರಮೇಶ್ವರ್ ಪ್ರಯಾಣ…
