NEET: ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ಎಫೆಕ್ಟ್: ಪರೀಕ್ಷೆ ರದ್ದತಿಯ ಆಘಾತಕ್ಕೆ ದೇಶಾದ್ಯಂತ ನಾಲ್ವರು ವಿದ್ಯಾರ್ಥಿಗಳ ಬಲಿ
ನವದೆಹಲಿ: ಮೇ 3 ರಂದು ನಡೆದಿದ್ದ ನೀಟ್ (NEET) ಪರೀಕ್ಷೆಯನ್ನು ಹಠಾತ್ ರದ್ದುಗೊಳಿಸಿದ ಸರ್ಕಾರದ ತೀರ್ಪು ದೇಶದಲ್ಲಿ ಭಾರಿ ಆಕ್ರೋಶ ಮತ್ತು ಕಳವಳಕ್ಕೆ ಕಾರಣವಾಗಿದೆ. ಭವಿಷ್ಯದ ವೈದ್ಯರಾಗುವ ಕನಸು ಹೊತ್ತಿದ್ದ ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳು ಈ ನಿರ್ಧಾರದಿಂದ ಕಂಗಾಲಾಗಿ ಬೇರೆ ಬೇರೆ ರಾಜ್ಯಗಳಲ್ಲಿ ತಮ್ಮ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ. ಕೈಗೆ ಬಂದ ಸೀಟು ಜಾರಿದ್ದಕ್ಕೆ ರಾಜಸ್ಥಾನದ ಪ್ರದೀಪ್ ಆತ್ಮಹತ್ಯೆ: ಕಳೆದ ಮೂರು ವರ್ಷಗಳಿಂದ ರಾಜಸ್ಥಾನದ ಸೀಕರ್‌ನಲ್ಲಿ ತಂಗಿ ಹಗಲಿರುಳು ಶ್ರಮಿಸುತ್ತಿದ್ದ ಪ್ರದೀಪ್ ಮೇಘವಾಲ್ ಎಂಬ ಯುವಕ ನೇಣಿಗೆ ಶರಣಾಗಿದ್ದಾನೆ….
