Mysuru Dasara: ರಾಜಮಾತೆ ಪ್ರಮೋದಾದೇವಿ ಪತ್ರಕ್ಕೆ ‘ಟಕ್ಕರ್’ ನೀಡಿದ ನಗರ ಪೊಲೀಸ್ ಆಯುಕ್ತೆ: ಅರಮನೆ ವಿವಾದದ ಕುರಿತು ಸುದೀರ್ಘ ಸ್ಪಷ್ಟನೆ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವ ಯಶಸ್ವಿಯಾಗಿ ಮುಕ್ತಾಯಗೊಂಡು ವಾರ ಕಳೆದಿದ್ದರೂ, ಹಬ್ಬದ ಸುತ್ತ ಸೃಷ್ಟಿಯಾಗಿದ್ದ ವಿವಾದಗಳು ಹಾಗೂ ಗೊಂದಲಗಳು ಮಾತ್ರ ಇನ್ನೂ ಶಮನಗೊಂಡಿಲ್ಲ. ದಸರಾ ಆಚರಣೆಯ ವೇಳೆ ಪೊಲೀಸ್ ಇಲಾಖೆಯು ಅತಿಯಾದ ದರ್ಪ ಮೆರೆದಿದೆ, ಸಚಿವರಿಗಾಗಲಿ ಹಾಗೂ ರಾಜಮನೆತನದ ಗೌರವಕ್ಕಾಗಲಿ ಸೂಕ್ತ ಕಿಮ್ಮತ್ತು ನೀಡಲಾಗಿಲ್ಲ ಎಂಬ ತೀವ್ರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಮೈಸೂರು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಸರ್ಕಾರಕ್ಕೆ ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದು ತಮ್ಮ…
