Murasu Cyclone: ಆಂಧ್ರಕ್ಕೆ ಅಪ್ಪಳಿಸಿದ ‘ಮುರಸು’ ಭೀಕರ ಚಂಡಮಾರುತ: 120 ಕಿ.ಮೀ ವೇಗದ ಬಿರುಗಾಳಿ
ನವದೆಹಲಿ: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಭೀಕರ ‘ಮುರಸು’ (Murasu Cyclone) ಚಂಡಮಾರುತವು ಅಂತಿಮವಾಗಿ ಮಧ್ಯರಾತ್ರಿ ಭಾರಿ ಆರ್ಭಟದೊಂದಿಗೆ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಿದೆ. ನವೆಂಬರ್ 2 ಮತ್ತು 3 ರ ಮಧ್ಯಂತರ ರಾತ್ರಿ ನೆಲ್ಲೂರು ಹಾಗೂ ನರಸಾಪುರದ ನಡುವಿನ ಕರಾವಳಿ ಭಾಗಕ್ಕೆ ದಂಡೆತ್ತಿ ಬಂದ ಈ ಚಂಡಮಾರುತವು, ಗಂಟೆಗೆ 110 ರಿಂದ 120 ಕಿಲೋಮೀಟರ್ ವೇಗದಲ್ಲಿ ಬೀಸಿದ ಬಿರುಗಾಳಿ ಮತ್ತು ಪ್ರಚಂಡ ಮಳೆಯಿಂದಾಗಿ ಭಾರಿ ವಿನಾಶವನ್ನು ಸೃಷ್ಟಿಸಿದೆ. ಸತತವಾಗಿ ಸುರಿಯುತ್ತಿರುವ ಸುರಿಮಳೆಯಿಂದಾಗಿ ಆಂಧ್ರಪ್ರದೇಶ ಹಾಗೂ ನೆರೆಯ ಕರಾವಳಿ ಭಾಗಗಳಲ್ಲಿ ಜನಜೀವನ…
