Marriage: ಮದುವೆಗೆ ಜಾತಕವಷ್ಟೇ ಸಾಲದು: ಹಸೆಮಣೆ ಏರುವ ಮುನ್ನ ಈ 6 ವಿಷಯಗಳ ಬಗ್ಗೆ ಚರ್ಚಿಸಿ
ಬೆಂಗಳೂರು: ಹಿಂದೂ ಸಂಪ್ರದಾಯದ ಪ್ರಕಾರ ಯಾವುದೇ ಮದುವೆ (Marriage) ನಿಶ್ಚಯಿಸುವ ಮುನ್ನ ವಧು-ವರರ ಜಾತಕ, ನಾಡಿ ಹಾಗೂ ಗಣಗಳ ಹೊಂದಾಣಿಕೆ ನೋಡುವುದು ಬಹುಮುಖ್ಯವಾದ ಆಚರಣೆಯಾಗಿದೆ. ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಗಳು ಹಾಗೂ ಗ್ರಹಗತಿಗಳ ಆಧಾರದ ಮೇಲೆ ಜೋಡಿಯ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ಆದರೆ, ಜಾತಕದಲ್ಲಿ ೩೬ ಗುಣಗಳು ಸಂಪೂರ್ಣವಾಗಿ ಒಪ್ಪiಯಾಗಿ, ಗುರುಬಲ ಹಾಗೂ ಶುಕ್ರದೆಸೆ ಎಷ್ಟೇ ಅತ್ಯುತ್ತಮವಾಗಿದ್ದರೂ, ಇಬ್ಬರ ಮನಸ್ಸುಗಳು ಪರಸ್ಪರ ಬೆರೆಯದಿದ್ದರೆ ಆ ದಾಂಪತ್ಯ ಜೀವನ ಗಟ್ಟಿಯಾಗಿ ಉಳಿಯಲು ಸಾಧ್ಯವಿಲ್ಲ. ಕುಂಡಲಿ ಅಥವಾ ಜಾತಕದ ಹೊಂದಾಣಿಕೆಯಷ್ಟೇ ಅಲ್ಲದೆ, ಮನಸ್ಸುಗಳ…
