Kitchen Tips: ಫ್ರಿಡ್ಜ್‌ನಲ್ಲಿದ್ದರೂ ಬೆಂಡೆಕಾಯಿ ಕಪ್ಪಾಗುತ್ತಿದೆಯೇ?: ಇಲ್ಲಿದೆ ದೀರ್ಘಕಾಲ ತಾಜಾವಾಗಿಡುವ ಸಿಂಪಲ್ ಟಿಪ್ಸ್!
ರುಚಿಕರವಾದ ಖಾದ್ಯಗಳ ತಯಾರಿಕೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಬೆಂಡೆಕಾಯಿಯನ್ನು (Kitchen Tips) ಇಷ್ಟಪಡದವರೇ ಇಲ್ಲ. ಹುರಿದರೆ ಗರಿಗರಿಯಾಗಿ, ಬೇಯಿಸಿದರೆ ಮೃದುವಾಗಿ ಬಾಯಲ್ಲಿ ನೀರೂರಿಸುವ ಈ ತರಕಾರಿಯನ್ನು ಎಲ್ಲರೂ ಮೆಚ್ಚುತ್ತಾರೆ. ಆದರೆ ಮಾರುಕಟ್ಟೆಯಿಂದ ತಂದ ಬೆಂಡೆಕಾಯಿಯನ್ನು ಹೆಚ್ಚು ದಿನಗಳವರೆಗೆ ತಾಜಾವಾಗಿ ಹಾಗೂ ಹಸಿರಾಗಿ ಕಾಪಾಡಿಕೊಳ್ಳುವುದು ಮಾತ್ರ ಗೃಹಿಣಿಯರಿಗೆ ಸದಾ ದೊಡ್ಡ ಸವಾಲೇ ಸರಿ. ಸರಿಯಾದ ರೀತಿಯಲ್ಲಿ ಸಂಗ್ರಹಿಸದಿದ್ದರೆ, ಬೆಂಡೆಕಾಯಿ ಕೆಲವೇ ದಿನಗಳಲ್ಲಿ ತನ್ನ ಗರಿಗರಿ ಗುಣವನ್ನು ಕಳೆದುಕೊಂಡು, ಒಣಗಿ, ಮೃದುವಾಗಿ ಅಥವಾ ಕಪ್ಪು ಬಣ್ಣಕ್ಕೆ ತಿರುಗಿ ಹಾಳಾಗುತ್ತದೆ. ಫ್ರಿಡ್ಜ್‌ನಲ್ಲಿಟ್ಟರೂ…
