Keir Starmer: ಒಂದೇ ದಶಕದಲ್ಲಿ ಬ್ರಿಟನ್ಗೆ 7ನೇ ಪ್ರಧಾನಿ; ಆಡಳಿತಾವಧಿ ಮುಗಿಯುವ ಮುನ್ನವೇ ಕೀರ್ ಸ್ಟಾರ್ಮರ್ ರಾಜೀನಾಮೆ ಘೋಷಣೆ!
ಲಂಡನ್: ಬ್ರಿಟನ್ ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಕೇವಲ ಹತ್ತು ವರ್ಷಗಳ ಅವಧಿಯಲ್ಲಿ ದೇಶವು ತನ್ನ ಏಳನೇ ಪ್ರಧಾನಿಯನ್ನು ಕಾಣಲು ಸಜ್ಜಾಗಿದೆ. ಲೇಬರ್ ಪಕ್ಷದ ಸರ್ಕಾರವನ್ನು ಮುನ್ನಡೆಸುತ್ತಿದ್ದ ಪ್ರಧಾನಿ ಕೀರ್ ಸ್ಟಾರ್ಮರ್ (Keir Starmer ) ಅವರು ಸುಮಾರು 23 ತಿಂಗಳುಗಳ ಅಧಿಕಾರಾವಧಿಯ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ಲಂಡನ್ನ 10 ಡೌನಿಂಗ್ ಸ್ಟ್ರೀಟ್ನಲ್ಲಿರುವ ತಮ್ಮ ಅಧಿಕೃತ ನಿವಾಸದ ಮುಂಭಾಗ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬ್ರಿಟನ್ ಲೇಬರ್ ಪಕ್ಷದ ನಾಯಕತ್ವದಿಂದ ಕೆಳಗಿಳಿಯುತ್ತಿರುವುದಾಗಿ ತಿಳಿಸಿದ್ದಾರೆ….
