Job Alert: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ನವೆಂಬರ್ 26ರಂದು ‘ಮಿನಿ ಉದ್ಯೋಗ ಮೇಳ’
ಚಿತ್ರದುರ್ಗ: ವಿದ್ಯಾಭ್ಯಾಸ ಮುಗಿಸಿ ಉತ್ತಮ ಉದ್ಯೋಗದ ನಿರೀಕ್ಷೆಯಲ್ಲಿರುವ (Job Alert) ಯುವಕ-ಯುವತಿಯರಿಗೆ ಕೋಟೆನಾಡು ಚಿತ್ರದುರ್ಗದಲ್ಲಿ ಇದೀಗ ಉತ್ತಮ ಅವಕಾಶವೊಂದು ಲಭ್ಯವಾಗಿದೆ. ಚಿತ್ರದುರ್ಗ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಇದೇ ನವೆಂಬರ್ 26ರ ಗುರುವಾರದಂದು ವಿಶೇಷ ‘ಮಿನಿ ಉದ್ಯೋಗ ಮೇಳ’ವನ್ನು ಹಮ್ಮಿಕೊಳ್ಳಲಾಗಿದೆ. ಈ ಮೇಳದ ಮೂಲಕ ಅರ್ಹ ಅಭ್ಯರ್ಥಿಗಳು ಒಂದೇ ಸ್ಥಳದಲ್ಲಿ ಹಲವು ಕಂಪನಿಗಳ ನೇರ ಸಂದರ್ಶನವನ್ನು ಎದುರಿಸಿ ಉದ್ಯೋಗ ಪಡೆದುಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಉದ್ಯೋಗ ಮೇಳ ನಡೆಯುವ ಸ್ಥಳ ಮತ್ತು ಸಮಯದ ವಿವರ ಈ…
