Bengaluru: ಫೈವ್ ಸ್ಟಾರ್ ಹೋಟೆಲ್‌ಗಳ ಕಿಚನ್‌ಗೆ ಅಧಿಕಾರಿಗಳ ಶಾಕ್: ದುಬಾರಿ ಹೋಟೆಲ್‌ಗಳಲ್ಲೂ ಕಳಪೆ ಆಹಾರ, ಗ್ರಾಹಕರಲ್ಲಿ ಆತಂಕ
ಬೆಂಗಳೂರು: ಸಿಲಿಕಾನ್ ಸಿಟಿಯ (Bengaluru) ಪ್ರತಿಷ್ಠಿತ ಪಂಚತಾರಾ (ಫೈವ್ ಸ್ಟಾರ್) ಹೋಟೆಲ್‌ಗಳಿಗೆ ಆರೋಗ್ಯ ಸುರಕ್ಷತಾ ವಿಭಾಗದ ಅಧಿಕಾರಿಗಳು ಶುಕ್ರವಾರ ದೊಡ್ಡ ಶಾಕ್ ನೀಡಿದ್ದಾರೆ. ದುಬಾರಿ ಹಣ ಪಡೆದು ಗ್ರಾಹಕರಿಗೆ ನೀಡಲಾಗುವ ಆಹಾರದ ಗುಣಮಟ್ಟ, ಅಡುಗೆ ಕೋಣೆಯ ಸ್ವಚ್ಛತೆ ಹಾಗೂ ಆಹಾರ ಸಂಸ್ಕರಣಾ ವಿಧಾನಗಳನ್ನು ಪರಿಶೀಲಿಸಲು 30ಕ್ಕೂ ಹೆಚ್ಚು ಅಧಿಕಾರಿಗಳ ಬೃಹತ್ ತಂಡ ನಗರದ ವಿವಿಧ ಹೋಟೆಲ್‌ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ. ಈ ತಪಾಸಣೆಯ ವೇಳೆ ಕೆಲವು ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳು ಹಾಗೂ…
