Black Grapes: ಕಪ್ಪು ದ್ರಾಕ್ಷಿಯಲ್ಲಿದೆ ಅದ್ಭುತ ಪೋಷಕಾಂಶ, ಈ ಪ್ರಯೋಜನಗಳು ಸಿಗುತ್ತೆ
ಈಗ ದ್ರಾಕ್ಷಿ ಹಣ್ಣುಗಳ ಕಾಲ ಆರಂಭವಾಗಿದೆ. ಹಸಿರು ಹಾಗೂ ಕಪ್ಪು ದ್ರಾಕ್ಷಿಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಈ ದ್ರಾಕ್ಷಿಯನ್ನು ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಕಪ್ಪು ದ್ರಾಕ್ಷಿಯಲ್ಲಿ ಮಧುಮೇಹ, ರಕ್ತದೊತ್ತಡ, ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಇದೆ. ಹಾಗಾದ್ರೆ ಈ ಕಪ್ಪು ದ್ರಾಕ್ಷಿಯ (Black Grapes) ಪ್ರಯೋಜನಗಳೇನು ಎಂಬುದು ಇಲ್ಲಿದೆ. ಡಯಾಬಿಟೀಸ್ ನಿವಾರಣೆ ಕಪ್ಪು ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣ ಮಾಡಲು ಸಹಾಯ ಮಾಡುತ್ತದೆ. ಈ ದ್ರಾಕ್ಷಿಯಲ್ಲಿ ರೆಸ್ವೆರಾಟ್ರೊಲ್ ಎಂಬ ಪದಾರ್ಥವಿದ್ದು,…
