Bengaluru: ಬೆಂಗಳೂರಿನಲ್ಲಿ 9 ಬೃಹತ್ ಫ್ಲೈಓವರ್ ಟೆಂಡರ್ ರದ್ದು: ಬಿ-ಸ್ಮೈಲ್ ಯೋಜನೆಯಲ್ಲಿ ಅಕ್ರಮ ಶಂಕೆ!
ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಾರ್ವಜನಿಕರನ್ನು ದಿನನಿತ್ಯ ಕಿರಿಕಿರಿಗೊಳಿಸುತ್ತಿರುವ ಭೀಕರ ವಾಹನ ದಟ್ಟಣೆ ಹಾಗೂ ನರಕಸದೃಶ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಮಹತ್ವಾಕಾಂಕ್ಷಿ ಮೇಲ್ಸೇತುವೆ (Flyover) ಯೋಜನೆಗಳಿಗೆ ಆರಂಭದಲ್ಲೇ ಭಾರೀ (Bengaluru) ವಿಘ್ನ ಎದುರಾಗಿದೆ. ನಗರದ ಸಂಚಾರ ವ್ಯವಸ್ಥೆಗೆ ಹೊಸ ರೂಪ ನೀಡಲು ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಸಂಸ್ಥೆಯು ಆಹ್ವಾನಿಸಿದ್ದ ಸುಮಾರು ₹3,060.57 ಕೋಟಿ ಅಂದಾಜು ಮೊತ್ತದ ಒಟ್ಟು 9 ಪ್ರಮುಖ ಮೇಲ್ಸೇತುವೆಗಳ ನಿರ್ಮಾಣ ಟೆಂಡರ್ ಪ್ರಕ್ರಿಯೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ…
