Property Law: ವಿಲ್ ಬರೆಯದೆ ವಿವಾಹಿತೆ ಮೃತಪಟ್ಟರೆ ಆಸ್ತಿ ಯಾರಿಗೆ ಸೇರುತ್ತೆ?: ಹಿಂದೂ ಉತ್ತರಾಧಿಕಾರ ಕಾಯ್ದೆಯ ಅಚ್ಚರಿಯ ನಿಯಮಗಳು!
ಬೆಂಗಳೂರು: ಹಿಂದೂ ಮಹಿಳೆಯೊಬ್ಬರು (Property Law) ತಮ್ಮ ಆಸ್ತಿಯ ಕುರಿತು ಯಾವುದೇ ಕಾನೂನಾತ್ಮಕ ಉಯಿಲು (Will) ಬರೆಯದೆ ಅಕಾಲಿಕವಾಗಿ ಮೃತಪಟ್ಟರೆ, ಆಕೆಯ ಆಸ್ತಿಗೆ ಯಾರು ನೈಜ ಉತ್ತರಾಧಿಕಾರಿಯಾಗುತ್ತಾರೆ ಎಂಬ ಪ್ರಶ್ನೆ ಹಲವರಲ್ಲಿ ಮೂಡುವುದು ಸಹಜ. ಸಾಮಾನ್ಯ ಕಲ್ಪನೆಯಂತೆ, ಗಂಡ ಅಥವಾ ಮಕ್ಕಳು ಇಲ್ಲದಿದ್ದರೆ ಆಸ್ತಿಯು ತಾನಾಗಿಯೇ ಮಹಿಳೆಯ ಪೋಷಕರಿಗೆ (ತಂದೆ-ತಾಯಿಗೆ) ತಲುಪುತ್ತದೆ ಎಂದು ಭಾವಿಸಲಾಗುತ್ತದೆ. ಆದರೆ, 1956ರ ಹಿಂದೂ ಉತ್ತರಾಧಿಕಾರ ಕಾಯ್ದೆಯ (Hindu Succession Act, 1956) ಪ್ರಕಾರ ನಿಯಮಗಳು ವಿಭಿನ್ನವಾಗಿವೆ. ಇಲ್ಲಿ ಮಹಿಳೆಯ ಆಸ್ತಿಯ ಮೂಲ…
