BMTC: ಬಿಎಂಟಿಸಿ ಇ-ಬಸ್ ಸರಣಿ ಅಪಘಾತ: ಹೈಟೆಕ್ ವಾಹನಗಳಿಗೆ ಬೇಕಿಲ್ಲವೇ ದಕ್ಷ ಚಾಲಕರು? ಬಯಲಾಯ್ತು ಅಸಲಿ ರಹಸ್ಯ!
ಬೆಂಗಳೂರು: ಸಿಲಿಕಾನ್ ಸಿಟಿಯ ಮಾಲಿನ್ಯ ನಿಯಂತ್ರಣಕ್ಕೆ ಮುನ್ನುಡಿ ಬರೆಯಲು ರಸ್ತೆಗಿಳಿದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಪರಿಸರಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳು (E-Buses), ಸದ್ಯ ಸಾರ್ವಜನಿಕರ ಪಾಲಿಗೆ ಆತಂಕದ ನೆರಳಾಗಿ ಮಾರ್ಪಟ್ಟಿವೆ. ನಗರದಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಸಾಲು ಸಾಲು ಇ-ಬಸ್ ದುರಂತಗಳು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ. ತಂತ್ರಜ್ಞಾನದಲ್ಲಿ ಅತ್ಯಾಧುನಿಕವಾಗಿರುವ ಈ ವಾಹನಗಳು ಸಾರ್ವಜನಿಕರ ಜೀವಕ್ಕೆ ಕುತ್ತು ತರುತ್ತಿರುವುದರ ಹಿನ್ನೆಲೆಯನ್ನು ಕೆದಕಿದಾಗ ನಿಗಮದ ಆಡಳಿತಾತ್ಮಕ ಲೋಪಗಳು ಎದ್ದು ಕಾಣುತ್ತಿವೆ. ಗಮ್ಯ ತಲುಪಿಸುವ ಬಸ್‌ಗಳಲ್ಲಿ ಸುರಕ್ಷತೆಯೇ ಶೂನ್ಯ? ರಾಜಧಾನಿಯ ಸಾರಿಗೆ ವ್ಯವಸ್ಥೆಯನ್ನು…
