Dia Mirza: ದಿಯಾ ಮಿರ್ಜಾ ದೀಪಾವಳಿ ವಿಡಿಯೋ ಡಿಲೀಟ್ ಪ್ರಕರಣ: ಬಿಎಂಸಿ ನಿರ್ಧಾರಕ್ಕೆ ತೀವ್ರ ಆಕ್ರೋಶ
ಮುಂಬೈ: ಮಾಲಿನ್ಯರಹಿತ ದೀಪಾವಳಿ ಆಚರಣೆಯ ಜಾಗೃತಿಗಾಗಿ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ನಿರ್ಮಿಸಿದ್ದ ಪ್ರಚಾರ ವೀಡಿಯೊ ಒಂದನ್ನು ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಿಂದ (Dia Mirza) ತೆರವುಗೊಳಿಸಿರುವುದು ಈಗ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಬಾಲಿವುಡ್ ನಟಿ ದಿಯಾ ಮಿರ್ಜಾ ಅಭಿನಯಿಸಿದ್ದ ಈ ಜಾಗೃತಿ ವಿಡಿಯೋವನ್ನು ಬಿಜೆಪಿ ನಾಯಕರ ಆಕ್ಷೇಪಣೆಯ ನಂತರ ಬಿಎಂಸಿ ಡಿಲೀಟ್ ಮಾಡಿದ್ದು, ಈ ನಡೆಗೆ ಶಿವಸೇನಾ ನಾಯಕರು ಹಾಗೂ ಸಾರ್ವಜನಿಕ ವಲಯದಿಂದ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಮುಂಬೈನಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ವಾಯು…
