Bomb Threat: ಕೋರ್ಟ್‌ಗಳಿಗೆ ಸರಣಿ ಇ-ಮೇಲ್ ಬಾಂಬ್ ಬೆದರಿಕೆ: ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಹೈಡ್ರಾಮಾ
ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲಾ ನ್ಯಾಯಾಲಯಗಳನ್ನು ಗುರಿಯಾಗಿಸಿಕೊಂಡು ಕಿಡಿಗೇಡಿಗಳು ನಡೆಸುತ್ತಿರುವ ಹುಸಿ ಬಾಂಬ್ ಇ-ಮೇಲ್ (Bomb Threat) ದಂಧೆ ಸಾರ್ವಜನಿಕ ವಲಯದಲ್ಲಿ ಭಾರಿ ತಲ್ಲಣ ಸೃಷ್ಟಿಸಿದೆ. ಜೂನ್ 19ರ ಶುಕ್ರವಾರದಂದು ರಾಜ್ಯದ ನಾಲ್ಕು ಪ್ರಮುಖ ಜಿಲ್ಲೆಗಳಾದ ಬಾಗಲಕೋಟೆ, ದಾವಣಗೆರೆ, ಧಾರವಾಡ ಮತ್ತು ಕೋಲಾರದ ಕೋರ್ಟ್ ಆವರಣಗಳಿಗೆ ಏಕಕಾಲದಲ್ಲಿ ಬೆದರಿಕೆ ಇ-ಮೇಲ್‌ಗಳು ಬಂದಿವೆ. ನ್ಯಾಯಾಲಯಗಳ ಒಳಗೆ ಬಾಂಬ್ ಅಡಗಿಸಿಡಲಾಗಿದೆ ಎಂಬ ಮಾಹಿತಿ ಹರಡುತ್ತಿದ್ದಂತೆ ವಕೀಲರು, ಕಕ್ಷಿದಾರರು ಹಾಗೂ ನ್ಯಾಯಾಂಗ ಸಿಬ್ಬಂದಿ ಪ್ರಾಣಭಯದಿಂದ ಆಚೆ ಓಡಿ ಬಂದಿದ್ದು, ಇಡೀ ಪೊಲೀಸ್…
