Biocon: ಬಯೋಕಾನ್ ಭವಿಷ್ಯದ ಸಾರಥಿಯಾಗಿ ಕ್ಲೇರ್ ಮಜುಂದಾರ್ ಆಯ್ಕೆ
ಬೆಂಗಳೂರು: ಭಾರತದ ಪ್ರಮುಖ ಜೈವಿಕ ತಂತ್ರಜ್ಞಾನ ಸಂಸ್ಥೆಯಾದ ‘ಬಯೋಕಾನ್’ನ (Biocon) ಮುಂದಿನ ಹಾದಿಯನ್ನು ರೂಪಿಸಲು ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು ಭದ್ರವಾದ ಅಡಿಪಾಯ ಹಾಕಿದ್ದಾರೆ. ನಾಲ್ಕು ದಶಕಗಳ ಕಾಲ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕಿರಣ್ ಮಜುಂದಾರ್ ಶಾ, ಇದೀಗ ತಮ್ಮ ಸೋದರಸಂಬಂಧಿ ಕ್ಲೇರ್ ಮಜುಂದಾರ್ ಅವರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಗುರುತಿಸಿದ್ದಾರೆ. ಫಾರ್ಚೂನ್ ಇಂಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿರುವ ಅವರು, ಬಯೋಕಾನ್‌ನ ಮುಂದಿನ ಬೆಳವಣಿಗೆಯನ್ನು ಮುನ್ನಡೆಸಲು ಕ್ಲೇರ್ ಅತ್ಯಂತ ಸೂಕ್ತ ವ್ಯಕ್ತಿ ಎಂಬ ವಿಶ್ವಾಸ…
