Bigg Boss: ಬಿಗ್‌ಬಾಸ್ 13 ರಂಗೇರಿದ ಅಖಾಡ: ಮೊದಲ ದಿನವೇ ಸ್ಪರ್ಧಿಗಳಿಗೆ ಬೆಡ್ ಸಿಗದೆ ಶಾಕ್ ಕೊಟ್ಟ ಬಿಗ್‌ಬಾಸ್!
ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 13 ಅತ್ಯಂತ ವೈಭವದಿಂದ ಚಾಲನೆ ಪಡೆದುಕೊಂಡಿದೆ. ಕಾರ್ಯಕ್ರಮದ ಆರಂಭದಲ್ಲಿ ಸ್ಪರ್ಧಿಗಳು ಅತ್ಯಂತ ಉತ್ಸಾಹ ಮತ್ತು ಸಂಭ್ರಮದಿಂದ ದೊಡ್ಮನೆಗೆ ವಿಮಾನದ ಮಾದರಿಯ ವಿನ್ಯಾಸದ ಮೂಲಕ ಎಂಟ್ರಿ ಕೊಟ್ಟಿದ್ದರು. ಬಿಗ್ ಬಾಸ್ ಮನೆ ಪ್ರವೇಶಿಸಿದ ಖುಷಿಯಲ್ಲಿ ಸ್ಪರ್ಧಿಗಳು ಕುಣಿದು ಕುಪ್ಪಳಿಸಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದರು. ಆದರೆ, ಈ ಆರಂಭಿಕ ಸಂಭ್ರಮ ಮತ್ತು ಖುಷಿ ಹೆಚ್ಚು ಹೊತ್ತು ಉಳಿಲಿಲ್ಲ. ಆಘಾತ ನೀಡಿದ ಬಿಗ್‌ಬಾಸ್ ಆದೇಶ…
