Bengaluru Crime: ಸಪ್ತ ನರಮೇಧ ಪ್ರಕರಣ: ಬಾಲಕ ಪುನೀತ್ ಮರಣೋತ್ತರ ವರದಿಯಲ್ಲಿ ಶಾಕಿಂಗ್ ಸತ್ಯ ಬಹಿರಂಗ
ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜಾಜಿನಗರದಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ (Bengaluru Crime) ಏಳು ಜನರ ಸರಣಿ ಕೊಲೆ (ಸಪ್ತ ನರಮೇಧ) ಪ್ರಕರಣದ ತನಿಖೆಯಲ್ಲಿ ಮತ್ತೊಂದು ಅತ್ಯಂತ ಮಹತ್ವದ ಹಾಗೂ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಪ್ರಕರಣದಲ್ಲಿ ಕೊಲೆಯಾದ ಮುಗ್ಧ ಬಾಲಕ ಪುನೀತ್ನ ಮರಣೋತ್ತರ ಪರೀಕ್ಷೆ (Post-Mortem) ವರದಿ ಇದೀಗ ಲಭ್ಯವಾಗಿದ್ದು, ಹಂತಕ ಇಂದುಶೇಖರ್ನ ಕರಾಳತೆ ಮತ್ತು ರಾಕ್ಷಸೀಯ ಪ್ರವೃತ್ತಿ ಸಂಪೂರ್ಣವಾಗಿ ಬಟಾಬಯಲಾಗಿದೆ. ಚಿಕ್ಕಬಳ್ಳಾಪುರದ ನಂದಿಬೆಟ್ಟದ ತಪ್ಪಲಿನ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದ ಮಗುವಿನ ಮೃತದೇಹದ ವೈದ್ಯಕೀಯ ತಪಾಸಣೆಯು ಹತ್ಯೆಯ…
