Ravi Hanj: ಸಣ್ಣ ಸುಳಿವನ್ನೂ ನೀಡದೆ ಗೌಪ್ಯವಾಗಿ ಲುಕ್‌ಔಟ್ ನೋಟಿಸ್: ಲೇಖಕ ರವಿ ಹಂಜ್ ಬಂಧನದ ಹಿಂದಿನ ಪೊಲೀಸರ ಚಾಣಾಕ್ಷ ನಡೆ
ಬೆಂಗಳೂರು: ‘ಬಸವ ಮಂಟಪ’ ಕೃತಿಯಲ್ಲಿ ಜಗಜ್ಯೋತಿ ಬಸವಣ್ಣನವರ ಕುರಿತು ಅವಹೇಳನಕಾರಿ ಬರಹಗಳನ್ನು ಪ್ರಕಟಿಸಿದ್ದಾರೆ ಎಂಬ ಗಂಭೀರ ಆರೋಪದ ಮೇಲೆ ಲೇಖಕ ರವಿ ಹಂಜ್ (Ravi Hanj) ಅವರನ್ನು ಪೊಲೀಸರು ಬಂಧಿಸಿರುವುದು ಈಗಾಗಲೇ ಸುದ್ದಿಯಾಗಿದೆ. ಆದರೆ ಈ ಬಂಧನದ ಹಿಂದೆ ಪೊಲೀಸರು ಅನುಸರಿಸಿದ ಅತ್ಯಂತ ಚಾಣಾಕ್ಷ ಹಾಗೂ ಗೌಪ್ಯ ತಂತ್ರವೊಂದು ಪ್ರಮುಖ ಪಾತ್ರ ವಹಿಸಿದೆ. ಆರೋಪಿಯು ದೇಶ ತೊರೆಯುವ ಮುನ್ನವೇ ಯಾವುದೇ ಸುಳಿವು ನೀಡದೆ ಬಲೆಗೆ ಬೀಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಣ್ಣ ಸುಳಿವನ್ನೂ ನೀಡದೆ ಗೌಪ್ಯವಾಗಿ ಲುಕ್‌ಔಟ್ ನೋಟಿಸ್…
