ISRO: ಇಸ್ರೋದಿಂದ ಉಚಿತ ಆನ್‌ಲೈನ್ ಕೋರ್ಸ್: AI ಹಾಗೂ ML ತಂತ್ರಜ್ಞಾನ ಕಲಿಕೆಗೆ ಸುವರ್ಣಾವಕಾಶ!
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ತಂತ್ರಜ್ಞಾನದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗಾಗಿ ಉಚಿತ ಆನ್‌ಲೈನ್ ಕೋರ್ಸ್ ಒಂದನ್ನು ಆಯೋಜಿಸಿದೆ. ‘ಜಲ ಸಂಪನ್ಮೂಲ ವಲಯದಲ್ಲಿ ಹೈಡ್ರೋ-ಇನ್ಫರ್ಮ್ಯಾಟಿಕ್ಸ್‌ಗಾಗಿ AI/ML’ ಎಂಬ ಶೀರ್ಷಿಕೆಯಡಿಯಲ್ಲಿ ಈ ತರಬೇತಿ ಕಾರ್ಯಕ್ರಮ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 4 ರ ಒಳಗಾಗಿ ಯಾವುದೇ ಶುಲ್ಕವಿಲ್ಲದೆ ಆನ್‌ಲೈನ್ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಈ ಕೋರ್ಸ್‌ನಲ್ಲಿ ಏನ್ನೆಲ್ಲಾ ಹೇಳಿಕೊಡಲಾಗುತ್ತೆ? ಡೆಹ್ರಾಡೂನ್‌ನಲ್ಲಿ ನೆಲೆಸಿರುವ ಇಸ್ರೋದ ಪ್ರಮುಖ ಅಂಗಸಂಸ್ಥೆಯಾದ ‘ಇಂಡಿಯನ್…
