ctor darshan devil film will release on OTT zee 5

Actor Darshan: ಒಟಿಟಿ ಹಾಗೂ ಟಿವಿಗೆ ಬರಲು ರೆಡಿಯಾಯ್ತು ‘ಡೆವಿಲ್’ ಚಿತ್ರ, ಖುಷಿಯಲ್ಲಿ ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಡಿ ಜೈಲು ಶಿಕ್ಷೆ ಅನುಭವಿಸುತ್ತಿರುವ ನಟ ದರ್ಶನ್ (Actor Darshan) ಬಿಡುಗಡೆಯಾಗುವುದನ್ನು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ ಸಿಕ್ಕಿದೆ. ಕಾನೂನು ಪ್ರಕ್ರಿಯೆಗಳ ಪ್ರಕಾರ ದರ್ಶನ್ ಸದ್ಯಕ್ಕಂತೂ ಹೊರಬರುವ ಸಾಧ್ಯತೆಗಳಿಲ್ಲ ಹಾಗೂ ಕನಿಷ್ಠ ಮತ್ತೊಂದು ವರ್ಷ ಜೈಲಿನಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹ ನಿರಾಶಾದಾಯಕ ಸನ್ನಿವೇಶದ ನಡುವೆಯೇ, ದರ್ಶನ್ ನಟನೆಯ ಕೊನೆಯ ಆ್ಯಕ್ಷನ್ ಸಿನಿಮಾವಾದ ‘ಡೆವಿಲ್’ ಕೊನೆಗೂ ಒಟಿಟಿ ಪ್ಲಾಟ್‌ಫಾರ್ಮ್ ಹಾಗೂ ಟಿವಿ ವಾಹಿನಿಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಜೀ5 ನಲ್ಲಿ…

Read More
sandalwood actor darshan kalasipalya re release

Actor Darshan: ಥಿಯೇಟರ್‌ಗಳಲ್ಲಿ ಮತ್ತೆ ‘ಡಿ ಬಾಸ್’ ಹವಾ: 20 ವರ್ಷಗಳ ಹಳೆಯ ‘ಕಲಾಸಿಪಾಳ್ಯ’ ರೀ-ರಿಲೀಸ್‌ಗೆ ಪ್ರಸನ್ನ ಚಿತ್ರಮಂದಿರ ಹೌಸ್‌ಫುಲ್!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (‌Actor Darshan) ಅಭಿನಯದ ಸ್ಯಾಂಡಲ್‌ವುಡ್‌ನ ಗರಂ ಆ್ಯಕ್ಷನ್ ಸಿನಿಮಾ ‘ಕಲಾಸಿಪಾಳ್ಯ’ ಜೂನ್ 19ರ ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಮತ್ತೆ ತೆರೆಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸುತ್ತಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಐತಿಹಾಸಿಕ ಪ್ರಸನ್ನ ಥಿಯೇಟರ್‌ನಲ್ಲಿ ದರ್ಶನ್ ಅಭಿಮಾನಿಗಳು ಈ ಚಿತ್ರದ ಮರು-ಬಿಡುಗಡೆಯನ್ನು ದೊಡ್ಡ ಹಬ್ಬದಂತೆ ಆಚರಿಸಿದ್ದಾರೆ. ನೆಚ್ಚಿನ ನಟನ ಬೃಹತ್ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡಿ, ಗಜಮಾಲೆ ಹಾಕಿ, ಪಟಾಕಿಗಳ ಸರವನ್ನೇ ಸಿಡಿಸಿ ಚಿತ್ರಪ್ರೇಮಿಗಳು ಅದ್ದೂರಿ ಸ್ವಾಗತ ಕೋರಿದ್ದಾರೆ. ಬೆಳ್ಳಿ ತೆರೆಯ ಮೇಲೆ ದರ್ಶನ್…

Read More
Boss film controversy Vijayalakshmi darshan petition to high court

Boss Film: ಚಿತ್ರಮಂದಿರಕ್ಕೆ ಬರುವ ಮುನ್ನವೇ ಹೈಕೋರ್ಟ್ ಮೆಟ್ಟಿಲೇರಿದ ‘ಬಾಸ್’ ವಿವಾದ: ಸಿನಿಮಾ ಪ್ರದರ್ಶನ ನಿಲ್ಲಿಸಲು ದರ್ಶನ್ ಪತ್ನಿ ಸಜ್ಜು

ಬೆಂಗಳೂರು: ಶೂಟಿಂಗ್ ಹಂತದಿಂದಲೇ ಸಾರ್ವಜನಿಕ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆ ಹುಟ್ಟುಹಾಕಿದ್ದ ವಿ. ಲವ ನಿರ್ದೇಶನದ ‘ಬಾಸ್’ (Boss Film) ಚಿತ್ರಕ್ಕೆ ಬಿಡುಗಡೆಯ ಹೊಸ್ತಿಲಿನಲ್ಲಿ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದೆ. ಇದೇ ಜೂನ್ 19ರಂದು ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದ್ದ ಈ ಚಿತ್ರಕ್ಕೆ ತಡೆ ನೀಡುವಂತೆ ಆಗ್ರಹಿಸಿ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರು ಈಗ ಹೈಕೋರ್ಟ್ ಕದ ತಟ್ಟಿದ್ದಾರೆ. ಕೊನೆ ಕ್ಷಣದ ಈ ಬೆಳವಣಿಗೆಯಿಂದಾಗಿ ಇಡೀ ಚಿತ್ರತಂಡ ಈಗ ಇಕ್ಕಟ್ಟಿಗೆ ಸಿಲುಕಿದೆ….

Read More
actor darshan pavitra gowda trail started from today in renukaswamy case

Actor Darshan: ರೇಣುಕಾಸ್ವಾಮಿ ಪ್ರಕರಣ: ಕೋರ್ಟ್ ಟ್ರಯಲ್ ಆರಂಭ; ಜೈಲಿನಿಂದಲೇ ಭಾಗಿಯಾದ ದರ್ಶನ್, ಪವಿತ್ರಾ ಗೌಡ

ಬೆಂಗಳೂರು: ಇಡೀ ರಾಜ್ಯವನ್ನೇ ನಡುಗಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನ್ಯಾಯಾಂಗ ತನಿಖೆ ಇಂದಿನಿಂದ ಮಹತ್ವದ ಹಂತಕ್ಕೆ ತಲುಪಿದೆ. ನಟ ದರ್ಶನ್, (Actor Darshan) ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳ ವಿರುದ್ಧದ ಅಧಿಕೃತ ಕೋರ್ಟ್ ವಿಚಾರಣೆ (ಟ್ರಯಲ್) ಬೆಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಇಂದಿನಿಂದ ಚಾಲನೆ ಪಡೆದುಕೊಂಡಿದೆ. ಬೆಂಗಳೂರಿನ ಸಿಸಿಹೆಚ್-59 ನ್ಯಾಯಾಲಯದ ಪ್ರಮುಖ ನ್ಯಾಯಾಧೀಶರಾದ ಸುಜಾತ ಮಡಿವಾಳಪ್ಪ ಸಾಂಬ್ರಾಣಿ ಅವರ ನೇತೃತ್ವದಲ್ಲಿ ಇಂದಿನ ಕಲಾಪ ಜರುಗಿತು. ಈ ಹಿಂದೆ ಪ್ರಕರಣದ ತನಿಖೆ ನಡೆಸುತ್ತಿದ್ದ ನ್ಯಾಯಾಲಯದಿಂದ…

Read More
aladangad kallurti deity temple which helped darshan in his crisis

Temple: ದರ್ಶನ್ ಸಂಕಷ್ಟಗಳ ಕಾಲದ ಆಸರೆ ಅಳದಂಗಡಿ ಕಲ್ಲುರ್ಟಿ ದೈವ: ಈ ಬಾರಿ ದೈವದ ಸನ್ನಿಧಿಗೆ ಬಾರದ ಕುಟುಂಬ

ಮಂಗಳೂರು: ಚಿತ್ರರಂಗದ ಸೂಪರ್ ಸ್ಟಾರ್ ಆಗಿರಲಿ ಅಥವಾ ರಾಜಕೀಯದ ಘಟಾನುಘಟಿ ನಾಯಕರೇ ಇರಲಿ, ವೈಯಕ್ತಿಕ ಜೀವನದಲ್ಲಿ ತೀವ್ರ ಸಂಕಷ್ಟ ಎದುರಾದಾಗ ದೈವ-ದೇವರ ಮೊರೆ ಹೋಗುವುದು ಕರಾವಳಿಯ ಆಚರಣೆಗಳಲ್ಲಿ ಪ್ರಮುಖವಾದದ್ದು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ದಿವಂಗತ ಸುಷ್ಮಾ ಸ್ವರಾಜ್ ಅವರಂತಹ ಪ್ರಮುಖ ನಾಯಕರು ನಡೆದುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ‘ಅಳದಂಗಡಿ ಸತ್ಯದೇವತೆ ಕಲ್ಲುರ್ಟಿ ದೈವಸ್ಥಾನ’ (Temple) ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ನಟ ದರ್ಶನ್ ಅವರ ಜೀವನದ…

Read More
actor darshan court agreed to give tv facility

Actor Darshan: ದಾಸನ ಡಿಮ್ಯಾಂಡಿಗೆ ಓಕೆ ಅಂದ ಕೋರ್ಟ್‌, ಕೊನೆಗೂ ಸಿಕ್ತು ಟಿವಿ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್‌ (Actor Darshan) ಮಾಡಿದ್ದ ಹೊಸ ಡಿಮ್ಯಾಂಡಿಗೆ ಕೋರ್ಟ್‌ ಒಪ್ಪಿಗೆ ನೀಡಿದ್ದು, ದಾಸ ಸ್ವಲ್ಪ ರಿಲ್ಯಾಕ್ಸ್‌ ಆಗಿದ್ದಾರೆ. ನಿನ್ನೆ ನಡೆದ ವಿಚಾರಣೆ ನಿನ್ನೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆದಿದ್ದು, ಪವಿತ್ರಾ ಗೌಡ, ದರ್ಶನ್ ಸೇರಿ ಕೆಲ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಈ ಸಮಯದಲ್ಲಿ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅವರು ತಮ್ಮ ಕೊಠಡಿಯಲ್ಲಿ ಟಿವಿ ಹಾಕಿಸಿಕೊಂಡುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು. ದರ್ಶನ್‌ ಮಾತ್ರವಲ್ಲದೇ ಎಲ್ಲಾ ಆರೋಪಿಗಳು…

Read More