Donald Trump: ಚೀನಾಗೆ ಬಂದಿಳಿದ ಟ್ರಂಪ್, ಮಹತ್ವದ ಮಾತುಕತೆ
ಬೀಜಿಂಗ್: ಅಮೆರಿಕ ಮತ್ತು ಇರಾನ್ ನಡುವೆ ಯುದ್ಧದ ಭೀತಿ ಹೆಚ್ಚಾಗಿರುವ ಸಂದರ್ಭದಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಚೀನಾ ಅಧ್ಯಕ್ಷ ಶೀ ಜಿನ್‌ಪಿಂಗ್ ಅವರೊಂದಿಗೆ ಮಹತ್ವದ ಶೃಂಗಸಭೆ ನಡೆಸಲು ಚೀನಾಕ್ಕೆ ಆಗಮಿಸಿದ್ದಾರೆ. ಈ ಭೇಟಿಯು ಜಾಗತಿಕ ಮಟ್ಟದ ರಾಜತಾಂತ್ರಿಕ ಹಾಗೂ ಆರ್ಥಿಕ ವಲಯಗಳಲ್ಲಿ ಹೊಸ ಸಂಚಲನ ಮೂಡಿಸಿದ್ದು, ಜಗತ್ತಿನ ಕಣ್ಣು ಈಗ ಬೀಜಿಂಗ್ ಮೇಲೆ ನೆಟ್ಟಿದೆ. ಜಾಗತಿಕ ತೈಲ ಭದ್ರತೆಯ ಬಗ್ಗೆ ಚರ್ಚೆ ಇರಾನ್‌ನ ಅಣುಶಕ್ತಿ ಕಾರ್ಯಕ್ರಮ ಹಾಗೂ ಅಂತರಾಷ್ಟ್ರೀಯ ತೈಲ ಬಿಕ್ಕಟ್ಟಿನಿಂದಾಗಿ…
