ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಮತ್ತು ಸುತ್ತಮುತ್ತಲಿನ ಗುಮ್ಮಗೋಡು (Heavy Rain) ಪ್ರದೇಶಗಳಲ್ಲಿ ಕಳೆದ ಕೆಲವು ಗಂಟೆಗಳಿಂದ ಭಾರಿ ಮಳೆ ಸುರಿಯುತ್ತಿದೆ. ಈ ಧಾರಾಕಾರ ಮಳೆಯಿಂದಾಗಿ ಬಿಸಿಲಿನಿಂದ ಕಂಗೆಟ್ಟಿಂದ ಜನರಿಗೆ ತಂಪಾಗಿದೆ.
ವಾತಾವರಣದಲ್ಲಿ ಬದಲಾವಣೆ
ಕಳೆದ ಹಲವು ದಿನಗಳಿಂದ ಕಾದ ಕಾವಲಿಯಂತಿದ್ದ ಈ ಭಾಗದಲ್ಲಿ, ಸಂಜೆಯ ವೇಳೆಗೆ ವರುಣ ದೇವ ಕೃಪೆ ತೋರಿದ್ದಾನೆ. ಭೋರ್ಗರೆದ ಮಳೆಯಿಂದಾಗಿ ವಾತಾವರಣ ಸಂಪೂರ್ಣವಾಗಿ ತಂಪಾಗಿದ್ದು, ತಾಪಮಾನದಲ್ಲಿ ಗಣನೀಯ ಇಳಿಕೆಯಾಗಿದೆ. ಇದರಿಂದ ಸ್ಥಳೀಯರು ಮತ್ತು ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ತಿಯಾದ ಬಿಸಿಲಿಗೆ ತತ್ತರಿಸಿದ್ದ ಜನರಿಗೆ ಈ ಮಳೆ ಹೊಸ ಚೈತನ್ಯವನ್ನು ನೀಡಿದೆ. ಮಳೆಯ ಆರ್ಭಟದಿಂದ ತಗ್ಗು ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಸಂಗ್ರಹವಾದರೂ, ಹವಾಮಾನದಲ್ಲಿನ ತಂಪು ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಮುಂದಿನ ಕೆಲ ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಮುನ್ಸೂಚನೆ ನೀಡಿದೆ. ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ವಿಮಾನ ನಿಲ್ದಾಣಗಳ ಸುತ್ತಮುತ್ತಲ ಕಟ್ಟಡ ನಿರ್ಮಾಣ ನಿರ್ಬಂಧ ಸಡಿಲಿಕೆಗೆ ಕೇಂದ್ರಕ್ಕೆ ಮನವಿ
ವರದಿ: ಪ್ರಶಾಂತ್ ಭಟ್
