TOP NEWS

Bigg Boss: ಬಿಗ್ ಬಾಸ್ ಕನ್ನಡ 13ನೇ ಸೀಸನ್‌ಗೆ ಕಾಮನ್ ಮ್ಯಾನ್ ಎಂಟ್ರಿ: ಆಡಿಷನ್ ರೂಲ್ಸ್‌ ಮರೆಯಬೇಡಿ

bigg boss kannada audition video rules released

ಬೆಂಗಳೂರು: ಕನ್ನಡಿಗರ ನೆಚ್ಚಿನ ರಿಯಾಲಿಟಿ ಕಾರ್ಯಕ್ರಮ ‘ಬಿಗ್ ಬಾಸ್ ಕನ್ನಡ’ದ (Bigg Boss) ಹೊಸ ಸೀಸನ್ ಪ್ರಕ್ರಿಯೆಗಳು ಬಿರುಸಿನಿಂದ ಆರಂಭಗೊಂಡಿದ್ದು, ಈ ಬಾರಿಯೂ ಸಾಮಾನ್ಯ ಜನರಿಗೆ ದೊರೆತಿರುವ ಸುವರ್ಣಾವಕಾಶದ ಹಿನ್ನೆಲೆಯಲ್ಲಿ ಸ್ಪರ್ಧಾಕಾಂಕ್ಷಿಗಳಿಂದ ಭಾರಿ ಪೈಪೋಟಿ ವ್ಯಕ್ತವಾಗುತ್ತಿದೆ. ಈಗಾಗಲೇ ಬಿಗ್ ಬಾಸ್ ಮನೆ ಪ್ರವೇಶಿಸಲು ಉತ್ಸುಕರಾಗಿರುವ ನೂರಾರು ಜನ ತಮ್ಮ ಆಡಿಷನ್ ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತಿದ್ದಾರೆ. ಆದರೆ ಆತುರದಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೆ ನಿಮ್ಮ ಅರ್ಜಿ ಮೊದಲ ಹಂತದಲ್ಲೇ ತಿರಸ್ಕಾರಗೊಳ್ಳುವ ಸಾಧ್ಯತೆ ಇರುತ್ತದೆ. ಆಕಾಂಕ್ಷಿಗಳ ನೆರವಿಗಾಗಿ ಕಲರ್ಸ್ ಕನ್ನಡ ವಾಹಿನಿಯು ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಮೂರು ನಿಮಿಷದ ವಿಡಿಯೋ ಇರಲೇಬೇಕು

ಅರ್ಜಿ ಸಲ್ಲಿಸುವವರು ಸಿದ್ಧಪಡಿಸುವ ಆಡಿಷನ್ ವಿಡಿಯೋ ಕರಾರುವಕ್ಕಾಗಿ ಮೂರು ನಿಮಿಷಗಳ ಕಾಲಾವಧಿಯನ್ನು ಹೊಂದಿರಬೇಕು. ಅದಕ್ಕಿಂತ ತೀರಾ ಚಿಕ್ಕದಾದ ಅಥವಾ ಅತಿ ಉದ್ದವಾದ ವಿಡಿಯೋಗಳನ್ನು ಆಯ್ಕೆ ಸಮಿತಿಯು ಮೊದಲೇ ರಿಜೆಕ್ಟ್ ಮಾಡುತ್ತದೆ. ಹೀಗಾಗಿ ದೊರೆಯುವ ನಿಖರ ಮೂರು ನಿಮಿಷಗಳಲ್ಲಿ ನಿಮ್ಮನ್ನು ನೀವು ಸಮರ್ಥವಾಗಿ ಪರಿಚಯಿಸಿಕೊಳ್ಳಬೇಕಾಗುತ್ತದೆ. ವಿಡಿಯೋದಲ್ಲಿ ಬರೀ ನಿಮ್ಮ ಹೆಸರು, ವಿಳಾಸದಂತಹ ಪ್ರಾಥಮಿಕ ಮಾಹಿತಿ ನೀಡಿದರೆ ಸಾಲದು. ಅದರ ಬದಲು ನೀವು ಬಿಗ್ ಬಾಸ್ ಮನೆಗೆ ಹೋಗಲು ಇರುವ ಮುಖ್ಯ ಕಾರಣಗಳೇನು ಮತ್ತು ನಿಮ್ಮ ವ್ಯಕ್ತಿತ್ವದ ಭಿನ್ನತೆ ಹಾಗೂ ವಿಶೇಷತೆಗಳೇನು ಎಂಬುದನ್ನು ಆಕರ್ಷಕ ಶೈಲಿಯಲ್ಲಿ ಮನವರಿಕೆ ಮಾಡಿಕೊಡಬೇಕು.

ವಿಡಿಯೋ ಕ್ವಾಲಿಟಿಯೂ ಮುಖ್ಯ

ಇದರೊಂದಿಗೆ ವಿಡಿಯೋದ ಗುಣಮಟ್ಟ ಮತ್ತು ರೆಕಾರ್ಡ್ ಮಾಡುವ ಹಿನ್ನೆಲೆಯ (Background) ಕಡೆಗೂ ವಿಶೇಷ ಗಮನ ಹರಿಸಬೇಕಾಗುತ್ತದೆ. ಕತ್ತಲಿರುವ ಕೋಣೆಯಲ್ಲಿ ಅಥವಾ ಸುತ್ತಮುತ್ತ ಅತಿಯಾದ ಗದ್ದಲವಿರುವ ಜಾಗದಲ್ಲಿ ಚಿತ್ರೀಕರಿಸಿದ ವಿಡಿಯೋಗಳು ನೇರವಾಗಿ ಕಸದ ಬುಟ್ಟಿ ಸೇರುತ್ತವೆ. ಈ ಕಾರಣಕ್ಕಾಗಿ ಯಾವುದೇ ಸದ್ದಿಲ್ಲದ, ಮುಖದ ಮೇಲೆ ಸರಿಯಾದ ಬೆಳಕು ಬೀಳುವಂತಹ ನಿಶ್ಯಬ್ದ ಜಾಗದಲ್ಲಿ ಧ್ವನಿ ಅತ್ಯಂತ ಸ್ಪಷ್ಟವಾಗಿ ಕೇಳಿಸುವಂತೆ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ನಿಮ್ಮ ಎಲ್ಲಾ ವಿವರಗಳನ್ನೊಳಗೊಂಡ ಮೂರು ನಿಮಿಷದ ವಿಡಿಯೋ ಸಿದ್ಧವಾದ ಬಳಿಕ, ಅದನ್ನು ವಾಹಿನಿಯ ಅಧಿಕೃತ ಅಪ್‌ಲೋಡ್ ಲಿಂಕ್ ಆದ colorskannada.jiostar.com ವೆಬ್‌ಸೈಟ್‌ಗೆ ಭೇಟಿ ನೀಡಿ ಸಬ್ಮಿಟ್ ಮಾಡಬೇಕಾಗುತ್ತದೆ. ಸದ್ಯ ಅನೇಕರು ತಮ್ಮ ಪರಿಚಯದ ವಿಡಿಯೋಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ವಾಹಿನಿಯ ಖಾತೆಗೆ ಟ್ಯಾಗ್ ಮಾಡುತ್ತಿದ್ದಾರೆ. ಆದರೆ ಇಂತಹ ಯಾವುದೇ ವಿಡಿಯೋಗಳನ್ನು ಬಿಗ್ ಬಾಸ್ ತಂಡ ಪರಿಗಣಿಸುವುದಿಲ್ಲ. ಕೇವಲ ಅಧಿಕೃತ ವೆಬ್‌ಸೈಟ್ ಮೂಲಕ ಬರುವ ಪ್ರೊಫೈಲ್‌ಗಳನ್ನು ಮಾತ್ರ ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ:  ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್: ರಶ್ಮಿಕಾ ಮಂದಣ್ಣಗೆ ಒಲಿದೇ ಬಂತಾ ಭಾರತ ರತ್ನ ಗಾಯಕಿ ಪಾತ್ರ?

Leave a Reply

Your email address will not be published. Required fields are marked *