TOP NEWS

Sandeep

shashi tharoor praises amit shah and modi

Shashi Tharoor: ಬಿಜೆಪಿಯ ಚುನಾವಣಾ ತಂತ್ರಗಾರಿಕೆಗೆ ಶಶಿ ತರೂರ್ ಮೆಚ್ಚುಗೆ: ಕಾಂಗ್ರೆಸ್‌ನಲ್ಲಿ ಆತ್ಮಾವಲೋಕನಕ್ಕೆ ಕರೆ!

ನವದೆಹಲಿ: ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ದಾಖಲಿಸಿರುವ ಅಭೂತಪೂರ್ವ ಗೆಲುವಿನ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಕಾರ್ಯವೈಖರಿಯನ್ನು ಕಾಂಗ್ರೆಸ್ ಮುಖಂಡ ಶಶಿ ತರೂರ್ (Shashi Tharoor) ಶ್ಲಾಘಿಸಿದ್ದಾರೆ. ಎದುರಾಳಿ ಪಕ್ಷದ ಯಶಸ್ವಿ ಮ್ಯಾನೇಜ್‌ಮೆಂಟ್ ಕುರಿತು ಅವರು ನೀಡಿರುವ ಈ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ವೃತ್ತಿಪರ ಸಂಘಟನೆಗೆ ಸಂದ ಜಯ: ಬಿಜೆಪಿಯ ಚುನಾವಣಾ ನಿರ್ವಹಣೆಯ ಬಗ್ಗೆ ಮಾತನಾಡಿದ ತರೂರ್, “ನರೇಂದ್ರ ಮೋದಿ ಮತ್ತು ಅಮಿತ್…

Read More
santosh lad accuse election commission

Santosh Lad: ಇದು ಜನರ ಗೆಲುವಲ್ಲ, ಚುನಾವಣಾ ಆಯೋಗದ ಕೈಚಳಕ: ಬಿಜೆಪಿ ವಿರುದ್ಧ ಸಚಿವ ಸಂತೋಷ್ ಲಾಡ್ ಕಿಡಿ!

ಬೆಂಗಳೂರು: ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಅನಿರೀಕ್ಷಿತವಾಗಿ ಜಯಭೇರಿ ಬಾರಿಸಿರುವುದಕ್ಕೆ ಸಚಿವ ಸಂತೋಷ್ ಲಾಡ್ (Santosh Lad) ಅವರು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಗೆಲುವಿನ ಹಿಂದೆ ಮತದಾರರ ಬೆಂಬಲಕ್ಕಿಂತ ಹೆಚ್ಚಾಗಿ ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾದ ಜ್ಞಾನೇಶ್ ಕುಮಾರ್ ಅವರ ಪಾತ್ರವೇ ದೊಡ್ಡದಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ಚುನಾವಣಾ ಆಯುಕ್ತರೇ ‘ಮ್ಯಾನ್ ಆಫ್ ದಿ ಮ್ಯಾಚ್’: ಅಸ್ಸಾಂ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಲಾಡ್, “ಅಲ್ಲಿನ ಗೆಲುವಿಗೆ ಜ್ಞಾನೇಶ್ ಕುಮಾರ್…

Read More
high court gives stay to state primary school association election procedure

High Court: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ಹೈಕೋರ್ಟ್ ಬ್ರೇಕ್

ಬೆಂಗಳೂರು: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೈಕೋರ್ಟ್ (High Court) ತಡೆಯಾಜ್ಞೆ ನೀಡಿದೆ. ಕೆಳ ಹಂತದ ನ್ಯಾಯಾಲಯ ನೀಡಿದ್ದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಹೈಕೋರ್ಟ್‌ನ ಏಕಸದಸ್ಯ ಪೀಠವು, ಸದ್ಯಕ್ಕೆ ಯಾವುದೇ ಚುನಾವಣಾ ಚಟುವಟಿಕೆ ನಡೆಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರಿಂದಾಗಿ ಹಾಲಿ ಪದಾಧಿಕಾರಿಗಳಿಗೆ ಭಾರಿ ಹಿನ್ನಡೆಯಾಗಿದೆ. ಗಂಭೀರ ಸ್ವರೂಪದ ಅಕ್ರಮಗಳ ಆರೋಪ: ಸಂಘದ ಹಾಲಿ ಅಧ್ಯಕ್ಷ ಚಂದ್ರಶೇಖರ್ ನುಗ್ಲಿ ಮತ್ತು ಕಾರ್ಯದರ್ಶಿ ಚೇತನ್ ನುಗ್ಲಿ ಅವರು ಚುನಾವಣೆಯಲ್ಲಿ ಗೆಲ್ಲುವ…

Read More
vijay may resign to east Tiruchirappalli

Vijay: ಪೆರಂಬೂರು ಉಳಿಸಿಕೊಂಡು ತಿರುಚಿ ಕ್ಷೇತ್ರಕ್ಕೆ ವಿಜಯ್ ವಿದಾಯ? ಜಯಲಲಿತಾ ಹಾದಿಯಲ್ಲಿ ‘ದಳಪತಿ’ ಪಯಣ!

ಚೆನ್ನೈ: ತಮಿಳುನಾಡಿನ ಚುನಾವಣಾ ಅಖಾಡದಲ್ಲಿ ದ್ರಾವಿಡ ಪಕ್ಷಗಳ ದಶಕಗಳ ಆಧಿಪತ್ಯವನ್ನು ಅಲುಗಾಡಿಸಿರುವ ನಟ ವಿಜಯ್, (Vijay) ಈಗ ಆಡಳಿತಾತ್ಮಕ ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಮೂಲಗಳ ಪ್ರಕಾರ, ತಾವು ಗೆದ್ದಿರುವ ಎರಡು ಕ್ಷೇತ್ರಗಳ ಪೈಕಿ ಪೆರಂಬೂರು ಕ್ಷೇತ್ರವನ್ನು ತಮ್ಮ ಬಳಿಯೇ ಉಳಿಸಿಕೊಂಡು, ತಿರುಚಿ (ಪೂರ್ವ) ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಅವರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಪೆರಂಬೂರು ಆಯ್ಕೆಗೆ ಕಾರಣವೇನು? ರಾಜಧಾನಿ ಚೆನ್ನೈಗೆ ಹತ್ತಿರವಿರುವ ಪೆರಂಬೂರು ಕ್ಷೇತ್ರವನ್ನು ಆಯ್ದುಕೊಳ್ಳುವ ಮೂಲಕ, ಆಡಳಿತಾತ್ಮಕ ಕೆಲಸಗಳನ್ನು ಮತ್ತು ಕ್ಷೇತ್ರದ ಜವಾಬ್ದಾರಿಗಳನ್ನು ಸಮರ್ಥವಾಗಿ…

Read More
panchamasali peetha controversy prohibitory order imposed

Panchamasali: ಪಂಚಮಸಾಲಿ ಪೀಠದಲ್ಲಿ ಲೆಕ್ಕದ ಸಂಘರ್ಷ: ಜಿಲ್ಲಾಡಳಿತದಿಂದ ನಿಷೇಧಾಜ್ಞೆ

ದಾವಣಗೆರೆ: ಹರಿಹರದ ಪಂಚಮಸಾಲಿ (Panchamasali) ಮಠದಲ್ಲಿ ವಚನಾನಂದ ಶ್ರೀಗಳ ಬೆಂಬಲಿಗರು ಹಾಗೂ ಟ್ರಸ್ಟ್ ಪದಾಧಿಕಾರಿಗಳ ನಡುವಿನ ಭಿನ್ನಮತ ತಾರಕಕ್ಕೇರಿದೆ. ಮಠದ ಒಳಜಗಳ ಬೀದಿ ರಂಪಾಟವಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತವು ಮಠದ ಆವರಣದಲ್ಲಿ ಒಂದು ತಿಂಗಳ ಕಾಲ ಕಟ್ಟುನಿಟ್ಟಿನ ನಿಷೇಧಾಜ್ಞೆ ಜಾರಿ ಮಾಡಿದೆ. ಸಭೆ-ಸಮಾರಂಭಗಳಿಗೆ ಬ್ರೇಕ್: ಮಾರ್ಚ್ ತಿಂಗಳಿನಿಂದಲೂ ಮಠದ ಎರಡು ಬಣಗಳ ನಡುವೆ ಸಂಘರ್ಷ ನಡೆಯುತ್ತಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗಿವೆ. ಮಠದ ಆವರಣದಲ್ಲಿ ನಡೆಯುವ ಸಭೆಗಳು ಸಾರ್ವಜನಿಕ ಶಾಂತಿಗೆ ಧಕ್ಕೆ ತರುತ್ತಿರುವುದರಿಂದ, ಮೇ 1 ರಿಂದ…

Read More
rb timmapur clarification about leadership change

RB Timmapur: ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿಗೆ ಬ್ರೇಕ್ ಹಾಕಿದ ಸಚಿವ ತಿಮ್ಮಾಪುರ್

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಸುದ್ದಿಗಳಿಗೆ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ (RB Timmapur) ಅವರು ಸ್ಪಷ್ಟನೆ ನೀಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯ ಕುರಿತು ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಮಾತುಕತೆಗಳು ನಡೆದಿಲ್ಲ. ಇದೆಲ್ಲವೂ ಕೇವಲ ಮಾಧ್ಯಮಗಳಲ್ಲಿ ಸೃಷ್ಟಿಯಾಗಿರುವ ಚರ್ಚೆಯಷ್ಟೇ ಎಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ. ವೈಯಕ್ತಿಕ ಹೇಳಿಕೆಗಳಿಗೆ ಮಹತ್ವವಿಲ್ಲ: ಇದೇ ಸಂದರ್ಭದಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಅದು ಅವರ ವೈಯಕ್ತಿಕ ಅನಿಸಿಕೆಯಾಗಿರಬಹುದು. ಶಾಸಕರು ಸಚಿವ…

Read More
West Bengal Asansol Durga temple which closed for many years reopens after bjp victory

West Bengal: ಬಂಗಾಳದಲ್ಲಿ ಬಿಜೆಪಿ ಭರ್ಜರಿ ಜಯ: ಅಸನ್ಸೋಲ್‌ನಲ್ಲಿ ಹಲವು ವರ್ಷಗಳ ಬಳಿಕ ತೆರೆದ ದುರ್ಗಾ ದೇವಸ್ಥಾನದ ಬಾಗಿಲು

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ದಿಗ್ವಿಜಯ ಸಾಧಿಸಿದ ಬೆನ್ನಲ್ಲೇ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ದೊಡ್ಡ ಬದಲಾವಣೆಗಳು ಗಾಳಿ ಬೀಸತೊಡಗಿವೆ. ಇದರ ಭಾಗವಾಗಿ, ಸ್ಥಳೀಯ ಉದ್ವಿಗ್ನತೆ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ಹಲವು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಅಸನ್ಸೋಲ್‌ನ ಪ್ರಸಿದ್ಧ ದುರ್ಗಾ ದೇವಸ್ಥಾನವು ಸೋಮವಾರ ಭಕ್ತರಿಗಾಗಿ ಮತ್ತೆ ತೆರೆದಿದೆ. ಶ್ರೀ ಶ್ರೀ ದುರ್ಗಾಮಾತಾ ಚಾರಿಟಬಲ್ ಟ್ರಸ್ಟ್ ನಿರ್ವಹಣೆಯಲ್ಲಿದ್ದ ಈ ದೇಗುಲಕ್ಕೆ ಈ ಹಿಂದೆ ವರ್ಷವಿಡೀ ಪ್ರವೇಶವಿರಲಿಲ್ಲ. ಕೇವಲ ದುರ್ಗಾ ಪೂಜೆ ಮತ್ತು…

Read More