TOP NEWS

prashanth Bhat

Prashanth Bhat is a seasoned journalist with experience on the front lines of crime and investigative reporting. Known for his sharp instincts and extensive network of sources within law enforcement and the judiciary, Prashanth has built a reputation for delivering hard-hitting, accurate, and ethical news coverage. Throughout his career, he has specialized in uncovering complex criminal syndicates, reporting on high-profile homicide investigations, and analyzing trends in cybercrime and financial fraud. His work goes beyond the surface of a police FIR; he is dedicated to humanizing the impact of crime on victims and exploring the systemic issues within the justice system. Prashanth’s reporting is characterized by a "boots-on-the-ground" approach, often being the first to break stories from crime scenes and courtrooms. His ability to translate complex legal proceedings into clear, compelling narratives has made him a trusted voice for readers seeking the truth behind the headlines. When he isn't chasing a lead or working his beats, Prashanth is a keen observer of forensic science developments and an advocate for press freedom and journalist safety.

Toxic Team Shares Birthday Gift for Kiara Advani Actress Turns Up the Heat as Nadiya

Toxic: ‘ತಬಾಹಿ’ ಬೆನ್ನಲ್ಲೇ ಮತ್ತೊಂದು ಸೌಂಡ್ ಮಾಡಿದ ಕಿಯಾರಾ ಅಡ್ವಾನಿ; ಹುಟ್ಟುಹಬ್ಬದ ದಿನವೇ ರಿಲೀಸ್ ಆಯ್ತು ‘ಟಾಕ್ಸಿಕ್’ ಚಿತ್ರದ ಗ್ಲಾಮರಸ್ ಲುಕ್!

ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ (Toxic) ಸಿನಿಮಾದ ‘ತಬಾಹಿ’ ಗೀತೆಯಲ್ಲಿ ತಮ್ಮ ಅಪ್ರತಿಮ ಸೌಂದರ್ಯದಿಂದ ಪ್ರೇಕ್ಷಕರ ಮನಗೆದ್ದಿದ್ದ ಬಾಲಿವುಡ್ ನಟಿ ಕಿಯಾರಾ ಅಡ್ವಾನಿ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಕಿಯಾರಾ ಅವರ ಜನ್ಮದಿನದ ಅಂಗವಾಗಿ ‘ಟಾಕ್ಸಿಕ್’ ಚಿತ್ರತಂಡವು ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದು, ಅವರ ಹೊಚ್ಚ ಹೊಸ ಲುಕ್‌ನ ಪೋಸ್ಟರ್ ಅನ್ನು ಹಂಚಿಕೊಂಡಿದೆ. ನಾದಿಯಾ ಪಾತ್ರದ ಹೊಸ ಝಲಕ್ ಈಗಾಗಲೇ ತೆರೆಮೇಲೆ ಯಶ್ ಮತ್ತು ಕಿಯಾರಾ ಜೋಡಿಯ ಅದ್ಭುತ ಜುಗಲ್‌ಬಂದಿ ಹಾಗೂ…

Read More
Punjab Paper Leak BJP Stages Massive Protest Outside AAP Delhi Office

Punjab: ಪಂಜಾಬ್ ಪೇಪರ್ ಲೀಕ್ ವಿವಾದ: ದೆಹಲಿ ಎಎಪಿ ಕಚೇರಿ ಎದುರು ಬಿಜೆಪಿ ಭಾರಿ ಪ್ರತಿಭಟನೆ

ಪಂಜಾಬ್: ಪಂಜಾಬ್‌ನಲ್ಲಿ ನಡೆದಿದೆ ಎನ್ನಲಾದ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಹಗರಣದ ವಿವಾದ ಇದೀಗ ರಾಷ್ಟ್ರ ರಾಜಧಾನಿ ದೆಹಲಿಗೂ ತಲುಪಿದೆ. ಪಂಜಾಬ್‌ನಲ್ಲಿ (Punjab) ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಾರ್ಟಿ (AAP) ವಿರುದ್ಧ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಾರ್ಯಕರ್ತರು ಮತ್ತು ನಾಯಕರು ದೆಹಲಿಯಲ್ಲಿರುವ ಎಎಪಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಈ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಪ್ರತಿಭಟನೆಯ ತೀವ್ರತೆಯ ಹಿನ್ನೆಲೆಯಲ್ಲಿ ಎಎಪಿ ಕಚೇರಿಯ…

Read More
Allu Arjun wins hearts as he removes shoes before accepting Lord Jagannath idol viral video earns widespread praise

Allu Arjun: ಜಗನ್ನಾಥನ ಮೂರ್ತಿ ಕಂಡ ತಕ್ಷಣ ಶೂ ಬಿಚ್ಚಿಟ್ಟ ಅಲ್ಲು ಅರ್ಜುನ್!; ಐಕಾನ್ ಸ್ಟಾರ್ ಸರಳತೆಗೆ ಫ್ಯಾನ್ಸ್ ಫಿದಾ, ವಿಡಿಯೋ ವೈರಲ್!

ಹೈದರಾಬಾದ್: ಟಾಲಿವುಡ್‌ನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರು ತಮ್ಮ ನಟನೆಯಷ್ಟೇ ಅಲ್ಲದೆ ಸರಳತೆ ಹಾಗೂ ಭಾರತೀಯ ಸಂಸ್ಕೃತಿ ಮತ್ತು ದೈವ ಭಕ್ತಿಯ ಮೂಲಕ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇತ್ತೀಚೆಗೆ ನಡೆದ ಅಭಿಮಾನಿಗಳ ಭೇಟಿಯ ಕಾರ್ಯಕ್ರಮವೊಂದರಲ್ಲಿ, ಅಭಿಮಾನಿಯೊಬ್ಬರು ತಂದಿದ್ದ ಜಗನ್ನಾಥ ಸ್ವಾಮಿಯ ವಿಗ್ರಹವನ್ನು ಸ್ವೀಕರಿಸುವ ಮುನ್ನ ಅಲ್ಲು ಅರ್ಜುನ್ ತಮ್ಮ ಕಾಲಿನಲ್ಲಿದ್ದ ಶೂಗಳನ್ನು ಬಿಚ್ಚಿ ಗೌರವ ಸಲ್ಲಿಸಿದ್ದಾರೆ. ಈ ಸರಳ ನಡೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಿನಿಮಾ ಪ್ರೇಮಿಗಳು…

Read More
No shots fired at students can a minister issue such orders Jitendra Singh slams Rahul Gandhi in Lok Sabha

Rahul Gandhi: ರಾಹುಲ್ ಗಾಂಧಿಗೆ ಆಡಳಿತದ ಜ್ಞಾನವೇ ಇಲ್ಲ!; ಅಮಿತ್ ಶಾ ಮೇಲಿನ ಆರೋಪಕ್ಕೆ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಭರ್ಜರಿ ತಿರುಗೇಟು!

ನವದೆಹಲಿ: ಕಳೆದ ವಾರ ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಆದೇಶ ನೀಡಿದ್ದರು ಎಂಬ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಗಂಭೀರ ಆರೋಪಕ್ಕೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ತಿರುಗೇಟು ನೀಡಿದೆ. ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಸಂಸತ್ತಿನಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರಿಗೆ ಆಡಳಿತಾತ್ಮಕ ಜ್ಞಾನದ ಕೊರತೆಯಿದೆ ಎಂದು ಲೇವಡಿ…

Read More
Big news Lok Sabha clears strict Public Examination Amendment Bill against paper leaks

Big News: ಲೋಕಸಭೆಯಲ್ಲಿ ಆಂಟಿ-ಪೇಪರ್ ಲೀಕ್ ಬಿಲ್ ಪಾಸ್

ನವದೆಹಲಿ: ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಂಡಿಸಿದ್ದ ‘ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ವಿಧೇಯಕ-2026’ಕ್ಕೆ (Public Examination Amendment Bill) ಲೋಕಸಭೆಯು ಬುಧವಾರ (Big News) ಅಂಗೀಕಾರ ನೀಡಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನೀಡಿದ ಹೇಳಿಕೆ ಹಾಗೂ ಜುಲೈ 20 ರಂದು ಜಂತರ್ ಮಂತರ್‌ನಿಂದ ನಡೆದ ‘ಸಂಸತ್ ಚಲೋ’ ಪ್ರತಿಭಟನೆಯ…

Read More
Education Portfolio Row Siddaramaiah targets Pralhad Joshi over Bilkis Bano case remarks

Siddaramaiah: ಜೋಶಿ ನೇಮಕದಿಂದ ಕನ್ನಡಿಗರು ತಲೆತಗ್ಗಿಸುವಂತಾಗಿದೆ!; ಧರ್ಮೇಂದ್ರ ಪ್ರಧಾನ್-ಪ್ರಲ್ಹಾದ್ ಜೋಶಿ ಇಬ್ಬರೂ ಆರ್‌ಎಸ್‌ಎಸ್ ಅವಳಿ ಜವಳಿ ಎಂದ ಸಿದ್ದರಾಮಯ್ಯ!

ಬೆಂಗಳೂರು: ದೇಶದ ಶಿಕ್ಷಣ ಸಚಿವರಾಗಿ ಕರ್ನಾಟಕದ ಸಂಸದರೊಬ್ಬರು ಅಧಿಕಾರ ಸ್ವೀಕರಿಸಿದ್ದಕ್ಕೆ ನಾವೆಲ್ಲರೂ ಹೆಮ್ಮೆಪಡಬೇಕಿತ್ತು, ಆದರೆ ಮಹಿಳಾ ಅತ್ಯಾಚಾರಿಗಳನ್ನು ಸಮರ್ಥಿಸಿಕೊಂಡಿದ್ದ ಪ್ರಲ್ಹಾದ್ ಜೋಶಿ ಅವರಿಗೆ ಈ ಮಹತ್ವದ ಜವಾಬ್ದಾರಿ ನೀಡಿರುವುದು ಇಡೀ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದೆ ಎಂದು ಸಿದ್ದರಾಮಯ್ಯ (Siddaramaiah) ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪ್ರಲ್ಹಾದ್ ಜೋಶಿ ಅವರ ವಿರುದ್ಧ ನೇರ ವಾಗ್ದಾಳಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹಾಗೂ ನೂತನ ಶಿಕ್ಷಣ…

Read More
Come and see the ground reality in Karnataka DK Shivakumar extends open invitation to Tamil Nadu CM Vijay

DK Shivakumar: ಕರ್ನಾಟಕದ ವಾಸ್ತವ ಸ್ಥಿತಿ ಬಂದು ನೋಡಿ!; ತಮಿಳುನಾಡು ಸಿಎಂ ವಿಜಯ್‌ಗೆ ಮುಕ್ತ ಆಹ್ವಾನ ನೀಡಿದ ಡಿ.ಕೆ. ಶಿವಕುಮಾರ್!

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನೀಡಿರುವ ಇತ್ತೀಚಿನ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮೆಟ್ಟಿಲೇರಲು ಕರ್ನಾಟಕ ಸರ್ಕಾರ ಗಂಭೀರ ಸಿದ್ಧತೆ ನಡೆಸಿದೆ. ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ಕಾವೇರಿ ನೀರನ್ನು ಹರಿಸಬೇಕು ಎಂದು ಜುಲೈ 30ರ ಬುಧವಾರ ಬೆಳಗ್ಗೆಯಿಂದ ಅನ್ವಯವಾಗುವಂತೆ ಸಮಿತಿಯು ಹೊರಡಿಸಿರುವ ಆದೇಶಕ್ಕೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ….

Read More