TOP NEWS

Renukaswamy Case: ನಟ ದರ್ಶನ್ ಲೀಗಲ್ ಟೀಮ್‌ನಲ್ಲಿ ಬಿಗ್ ಟ್ವಿಸ್ಟ್: ರೇಣುಕಾಸ್ವಾಮಿ ಹತ್ಯೆ ಕೇಸ್‌ನಿಂದ ವಕೀಲ ಸುನೀಲ್ ಕುಮಾರ್ ಔಟ್

Renukaswamy case darshan lawyer sunil kumar withdrawn

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ಅವರ ಕಾನೂನು ಹೋರಾಟದ ದಾರಿಯಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದೆ. ಈ ಹೈಪ್ರೊಫೈಲ್ ಕೇಸ್‌ನ ಆರಂಭದ ದಿನಗಳಿಂದಲೂ ದರ್ಶನ್ ಪರವಾಗಿ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದ ಮುಖ್ಯ ವಕೀಲ ಸುನೀಲ್ ಕುಮಾರ್ ಅವರು ದಿಢೀರನೆ ಪ್ರಕರಣದಿಂದ ಹಿಂದೆ ಸರಿದಿದ್ದಾರೆ. ಇದು ನಟ ದರ್ಶನ್ ಅವರ ವಕೀಲರ ತಂಡದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ.

ದರ್ಶನ್ ಮತ್ತು ಆಪ್ತರ ಪರ ವಕಾಲತ್ತು ವಾಪಸ್ ವಕೀಲ ಸುನೀಲ್ ಕುಮಾರ್ ಅವರು ಇನ್ಮುಂದೆ ಈ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರವಾಗಿ ಕೋರ್ಟ್‌ಗೆ ಹಾಜರಾಗುವುದಿಲ್ಲ ಎಂದು ತಿಳಿಸಿ ನ್ಯಾಯಾಲಯಕ್ಕೆ ಅಧಿಕೃತವಾಗಿ ಮೆಮೋ ಸಬ್ಮಿಟ್ ಮಾಡಿದ್ದಾರೆ. ಸುನೀಲ್ ಕುಮಾರ್ ಅವರ ಪರವಾಗಿ ಕಿರಿಯ ವಕೀಲ ಶೋಭಿತ್ ಅವರು 59ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಈ ನಿವೃತ್ತಿ ಪತ್ರವನ್ನು ಹಸ್ತಾಂತರಿಸಿದ್ದಾರೆ. ಕೇವಲ ನಟ ದರ್ಶನ್ ಮಾತ್ರವಲ್ಲದೆ, ಈ ಪ್ರಕರಣದ ಇತರ ಪ್ರಮುಖ ಆರೋಪಿಗಳಾದ ದರ್ಶನ್ ಆಪ್ತ ಲಕ್ಷ್ಮಣ್ ಹಾಗೂ ನಾಗರಾಜ್ ಪರವಾಗಿಯೂ ಸುನೀಲ್ ಕುಮಾರ್ ವಕಾಲತ್ತು ವಹಿಸಿದ್ದರು. ಈಗ ಈ ಮೂವರ ಕೇಸ್‌ಗಳಿಂದಲೂ ತಾವು ಹೊರಬಂದಿರುವುದಾಗಿ ಅವರು ಪ್ರಕಟಿಸಿದ್ದಾರೆ.

ಹೊಸ ವಕೀಲರ ನೇಮಕ: ದರ್ಶನ್ ಪ್ರತಿಕ್ರಿಯೆ ಸುನೀಲ್ ಕುಮಾರ್ ಅವರ ನಿರ್ಗಮನದ ಬೆನ್ನಲ್ಲೇ ದರ್ಶನ್ ಅವರ ರಕ್ಷಣೆಗೆ ರಾಜ್ಯದ ಹೆಸರಾಂತ ಹಿರಿಯ ವಕೀಲರಾದ ಹಶ್ಮತ್ ಪಾಷಾ ಅವರು ಮುಂದಾಗಿದ್ದಾರೆ. ಇನ್ಮುಂದೆ ಈ ಕೊಲೆ ಕೇಸ್‌ನಲ್ಲಿ ದರ್ಶನ್ ಪರವಾಗಿ ಹಶ್ಮತ್ ಪಾಷಾ ಅವರೇ ಕಾನೂನು ಹೋರಾಟ ಮುನ್ನಡೆಸಲಿದ್ದಾರೆ. “ನಿಮ್ಮ ಕೇಸ್ ನಿರ್ವಹಿಸಲು ಹಿರಿಯ ನ್ಯಾಯವಾದಿ ಹಶ್ಮತ್ ಪಾಷಾ ಅವರು ವಕಾಲತ್ತು ಜಾರಿಗೆ ತಂದಿದ್ದಾರೆ” ಎಂಬ ಮಹತ್ವದ ವಿಷಯವನ್ನು 59ನೇ ಸೆಷನ್ಸ್ ಕೋರ್ಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ನೇರವಾಗಿ ದರ್ಶನ್ ಗಮನಕ್ಕೆ ತಂದಿದೆ. ಇದಕ್ಕೆ ಜೈಲಿನಿಂದಲೇ ಉತ್ತರಿಸಿದ ನಟ ದರ್ಶನ್, “ಸರಿ ಸರ್, ನಾನು ಕೂಡ ಈ ಬಗ್ಗೆ ನನ್ನ ಫ್ಯಾಮಿಲಿ ಜೊತೆ ಮಾತನಾಡಿ ಮುಂದಿನ ನಿರ್ಧಾರವನ್ನು ಕೋರ್ಟ್‌ಗೆ ತಿಳಿಸುತ್ತೇನೆ” ಎಂದಿದ್ದಾರೆ.

ವೇಗ ಪಡೆದ ಸಾಕ್ಷಿಗಳ ವಿಚಾರಣೆ; ಜಾಮೀನು ಸಿಗುವುದು ಕಷ್ಟ? ಮತ್ತೊಂದೆಡೆ, ಕೋರ್ಟ್‌ನಲ್ಲಿ ಈ ಕೊಲೆ ಪ್ರಕರಣದ ನ್ಯಾಯಾಂಗ ತನಿಖೆಯು ಅತ್ಯಂತ ತ್ವರಿತವಾಗಿ ಸಾಗುತ್ತಿದ್ದು, ರೇಣುಕಾಸ್ವಾಮಿ ಅವರ ದೇಹದ ಫೋಟೋಗಳನ್ನು ಸಂಗ್ರಹಿಸಿದ್ದ ಸರ್ಕಾರಿ ಸಿಬ್ಬಂದಿಯ (ಸಾಕ್ಷಿ) ವಿಚಾರಣೆ ಪೂರ್ಣಗೊಂಡಿದೆ. ಸಾಮಾನ್ಯವಾಗಿ ಪ್ರಕರಣ ದಾಖಲಾದ ಒಂದು ವರ್ಷದ ಒಳಗೆ 60 ಪ್ರಮುಖ ಸಾಕ್ಷಿಗಳ ವಿಚಾರಣೆ ಮುಗಿಸಲು ಸಾಧ್ಯವಾಗದಿದ್ದರೆ, ತಾಂತ್ರಿಕ ಆಧಾರದ ಮೇಲೆ ದರ್ಶನ್‌ಗೆ ಮತ್ತೊಮ್ಮೆ ಜಾಮೀನು ಸಿಗುವ ಸಾಧ್ಯತೆಗಳಿದ್ದವು. ಆದರೆ, ಈಗ ನ್ಯಾಯಾಲಯವು ಸಾಕ್ಷಿಗಳ ತನಿಖೆಯನ್ನು ತೀವ್ರಗತಿಯಲ್ಲಿ ನಡೆಸುವಂತೆ ಕಟ್ಟುನಿಟ್ಟಿನ ಇನ್ಸ್ಟ್ರಕ್ಷನ್ ನೀಡಿರುವುದರಿಂದ, ಸದ್ಯಕ್ಕೆ ದರ್ಶನ್‌ಗೆ ಬೇಲ್ ಸಿಗಬಹುದು ಎಂಬ ನಿರೀಕ್ಷೆಗಳಿಗೆ ಹಿನ್ನಡೆಯಾಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: ಮಳೆಯಿಲ್ಲದೆ ಒಣಗುತ್ತಿದೆ ಬೆಳೆ, ಸಾಲದ ಸುಳಿಗೆ ಸಿಲುಕಿದ ಅನ್ನದಾತ

Leave a Reply

Your email address will not be published. Required fields are marked *