ಮೈಸೂರು: ಸಾಮಾನ್ಯವಾಗಿ ಫೆಬ್ರವರಿ 14 ಎಂದರೆ ಎಲ್ಲರಿಗೂ ನೆನಪಾಗೋದು ವ್ಯಾಲೆಂಟೈನ್ಸ್ ಡೇ. ಆದರೆ ಈ ಬಾರಿ ವ್ಯಾಲೆಂಟೈನ್ಸ್ ದಿನವನ್ನ ವಿಭಿನ್ನವಾಗಿ ಆಚರಿಸಲು ಮೈಸೂರಿನ (Mysuru) ಗಣಪತಿ ಸಚ್ಚಿದಾನಂದ ಆಶ್ರಮ (Sri Ganapathy Sachchidananda Swamiji) ನಿರ್ಧಾರ ಮಾಡಿದೆ.
ಹನುಮಾನ ಚಾಲೀಸ ಪಾರಾಯಣ ಮಹಾಯಜ್ಞ
ಪ್ರತಿವರ್ಷವೂ ಈ ವ್ಯಾಲೆಂಟೈನ್ಸ್ ಡೇ ವಿಚಾರವಾಗಿ ದೇಶದಲ್ಲಿ ವಿವಾದಗಳು ಸೃಷ್ಟಿ ಆಗುತ್ತದೆ. ಅದರ ಆಚರಣೆಯನ್ನ ಅನೇಕ ಜನರು ವಿರೋಧ ಮಾಡುತ್ತಾರೆ. ಆ ದಿನವೇ ಬೇರೆ ಬೇರೆ ರೀತಿಯ ಕಾರ್ಯಕ್ರಮಗಳನ್ನ ಸಹ ಆಯೋಜನೆ ಮಾಡಲಾಗುತ್ತದೆ. ಇದೀಗ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಕಡೆಯಿಂದ ಸಹ ಬಹಳ ವಿಶೇಷವಾದ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ.

ಹೌದು, ಆಶ್ರಮದ ವತಿಯಿಂದ ವ್ಯಾಲೆಂಟೈನ್ಸ್ ಡೇ ದಿನ ಹನುಮಾನ ಚಾಲೀಸ ಪಾರಾಯಣ ಮಹಾಯಜ್ಞ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರೂ ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.
ಎಲ್ಲಿ ನಡೆಯಲಿದೆ ಹನುಮಾನ ಚಾಲೀಸ ಪಾರಾಯಣ ಮಹಾಯಜ್ಞ?
ಇನ್ನು ಗಣಪತಿ ಸಚ್ಚಿದಾನಂದ ಆಶ್ರಮದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಹನುಮಾನ ಚಾಲೀಸ ಪಾರಾಯಣ ಮಹಾಯಜ್ಞವು ಫೆಬ್ರವರಿ 14 ರಂದು ಬೆಳಗ್ಗೆ ಮೈಸೂರಿನ ಮಹಾರಾಜ ಗ್ರೌಂಡ್ಸ್‌ನಲ್ಲಿ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಈ ಕಾರ್ಯಕ್ರಮ ಆರಂಭ ಆಗಲಿದ್ದು, ಈ ಕಾರ್ಯಕ್ರಮದಲ್ಲಿ ಹನುಮಾನ್ ಚಾಲೀಸವನ್ನ ಪಠಣೆ ಮಾಡಲಾಗುತ್ತದೆ. ಇದಲ್ಲದೇ, ಭಾಗವಹಿಸಿದ ಪ್ರತಿಯೊಬ್ಬರಿಗೂ ಹನುಮ ರಕ್ಷೆ ಸಹ ಕೊಡಲಾಗುತ್ತದೆ. ಹಾಗೆಯೇ, ಭಾಗವಹಿಸಿದ ಭಕ್ತರಿಗೆ ಸ್ವಾಮೀಜಿಗಳು ಅನ್ನ ಪ್ರಸಾದ ವ್ಯವಸ್ಥೆಯನ್ನ ಸಹ ಮಾಡಿದ್ದು, ಈ ಅದ್ಭುತ ದೈವಿಕ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕಾಗಿ ಮಠ ಕೋರಿದೆ.
ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
