ಬೆಂಗಳೂರು: ನಾಡಹಬ್ಬ ದಸರಾದ ಸಂಭ್ರಮ ಹಾಗೂ ಪವಿತ್ರ ಆಯುಧ ಪೂಜೆಯ ದಿನದಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರು ವಿಧಾನಸೌಧದಲ್ಲಿ ತಮ್ಮ ಧರ್ಮಪತ್ನಿ ಉಷಾ ಅವರೊಂದಿಗೆ ಭಕ್ತಿಭಾವದಿಂದ ಆಯುಧ ಪೂಜೆ ನೆರವೇರಿಸಿದರು.
ಸೋಷಿಯಲ್ ಮೀಡಿಯಾದಲ್ಲಿ ಡಿಕೆಶಿ ಪೋಸ್ಟ್
ವಿಧಾನಸೌಧದಲ್ಲಿ ನಡೆದ ಈ ಸರಳ ಹಾಗೂ ಅರ್ಥಪೂರ್ಣ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿ.ಕೆ. ಶಿವಕುಮಾರ್, ಅಧಿದೇವತೆ ತಾಯಿ ಶ್ರೀ ಚಾಮುಂಡೇಶ್ವರಿಯು ನಾಡಿನ ಪ್ರತಿಯೊಬ್ಬರ ಬದುಕಿನಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಯಾ ದೇವೀ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ । ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ॥ ಇಂದು ವಿಧಾನಸೌಧದಲ್ಲಿ ಧರ್ಮಪತ್ನಿ ಉಷಾ ಅವರೊಂದಿಗೆ ಆಯುಧ ಪೂಜೆ ಸಲ್ಲಿಸಿ, ಅಧಿದೇವತೆ ಶ್ರೀ ಚಾಮುಂಡೇಶ್ವರಿಯು ನಾಡಿನ ಪ್ರತಿಯೊಬ್ಬರ ಬದುಕಿನಲ್ಲೂ ಸುಖ, ಶಾಂತಿ, ಸಮೃದ್ಧಿ ತರಲಿ ಎಂದು ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದೆ. ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿರುವ ಪ್ರತಿಯೊಂದು ವಸ್ತುವನ್ನು ಗೌರವಿಸಿ, ಪೂಜೆ ಸಲ್ಲಿಸುವುದೇ ಈ ಪವಿತ್ರ ಹಬ್ಬದ ವಿಶೇಷವಾಗಿದೆ. ಈ ಶುಭ ಸಂದರ್ಭದಲ್ಲಿ ಭಗವಂತನ ಕೃಪೆಯಿಂದ ನಾಡು ಸುಭಿಕ್ಷೆಯಿಂದಿರಲಿ ಎಂದು ಆಶಿಸುತ್ತೇನೆ.
— DK Shivakumar (@DKShivakumar) October 19, 2026
ನಮ್ಮ ದೈನಂದಿನ ಬದುಕಿನಲ್ಲಿ ನಾವು ಬಳಸುವ ಪ್ರತಿಯೊಂದು ವಸ್ತು ಮತ್ತು ಉಪಕರಣಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಆ ಪ್ರತಿಯೊಂದು ವಸ್ತುವನ್ನು ಗೌರವಿಸಿ, ಕೃತಜ್ಞತಾ ಭಾವದಿಂದ ಪೂಜೆ ಸಲ್ಲಿಸುವುದೇ ಈ ಪವಿತ್ರ ಆಯುಧ ಹಬ್ಬದ ವಿಶೇಷ ಮಹತ್ವವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಈ ಶುಭ ಸಂದರ್ಭದಲ್ಲಿ ಭಗವಂತನ ಹಾಗೂ ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ನಾಡು-ನುಡಿ ಸುಭಿಕ್ಷೆಯಿಂದಿರಲಿ ಮತ್ತು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಅವರು ಹಾರೈಸಿದ್ದಾರೆ.
ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರ ಗಮನಕ್ಕೆ: ನವೆಂಬರ್ನಲ್ಲಿ ಪಿಂಕ್, ಬ್ಲೂ ಲೈನ್ ಟ್ರಯಲ್ ರನ್
