ಮುಂಬೈ: ಸ್ಯಾಂಡಲ್‌ವುಡ್ ರಾಕಿಂಗ್ ಸ್ಟಾರ್ ಯಶ್ (Actor Yash) ಅಭಿನಯದ ಹಾಗೂ ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಮಿಶ್ರ ಪ್ರತಿಕ್ರಿಯೆಗಳನ್ನು ಎದುರಿಸುತ್ತಿದೆ. ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಉತ್ತಮ ಗಳಿಕೆ ಕಾಣುತ್ತಿದ್ದರೂ, ವಿಮರ್ಶಕರ ಮಟ್ಟದಲ್ಲಿ ಕೇಳಿಬರುತ್ತಿರುವ ಭಿನ್ನ ಅಭಿಪ್ರಾಯಗಳ ನಡುವೆ ಈಗ ಪ್ರಸಿದ್ಧ ಬಾಲಿವುಡ್ ನಿರ್ದೇಶಕ ಆದಿತ್ಯ ಧರ್ (Aditya Dhar) ಯಶ್ ಬೆನ್ನಿಗೆ ನಿಂತಿದ್ದಾರೆ. ಇತ್ತೀಚೆಗಷ್ಟೇ ‘ಧುರಂಧರ್’ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನ ಅಲೆಯಲ್ಲಿರುವ ಆದಿತ್ಯ ಧರ್, ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ‘ಟಾಕ್ಸಿಕ್’ ಸಿನಿಮಾದ ಪೋಸ್ಟರ್ ಶೇರ್ ಮಾಡುವ ಮೂಲಕ ಮುಕ್ತವಾಗಿ ಬೆಂಬಲ ಸೂಚಿಸಿದ್ದಾರೆ.
ಯಶ್ ಅಭಿಮಾನಿಗಳಲ್ಲಿ ತುಂಬಿದ ಹೊಸ ಉತ್ಸಾಹ
ಆದಿತ್ಯ ಧರ್ ಅವರು ಪೋಸ್ಟರ್ ಜೊತೆಗೆ ಯಾವುದೇ ಸುದೀರ್ಘ ಸಂದೇಶವನ್ನು ಬರೆಯದಿದ್ದರೂ, ಬಲವಾದ ತೋಳಿನ ಹಾಗೂ ಕೆಂಪು ಹೃದಯದ ಎಮೋಜಿಗಳನ್ನು ಬಳಸುವ ಮೂಲಕ ಯಶ್ ಹಾಗೂ ಇಡೀ ‘ಟಾಕ್ಸಿಕ್’ ತಂಡದ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಬಾಲಿವುಡ್‌ನ ಪ್ರಮುಖ ನಿರ್ದೇಶಕರೊಬ್ಬರು ಈ ರೀತಿ ಮುಕ್ತವಾಗಿ ಬೆಂಬಲಕ್ಕೆ ನಿಂತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸಿನಿಮಾ ವಿರುದ್ಧ ಅಪಸ್ವರಗಳು ಕೇಳಿಬರುತ್ತಿರುವ ಈ ಸಮಯದಲ್ಲಿ ಆದಿತ್ಯ ಧರ್ ನೀಡಿರುವ ಈ ಬೆಂಬಲ ಯಶ್ ಅಭಿಮಾನಿಗಳಲ್ಲಿ ಹೊಸ ಉತ್ಸಾಹ ತುಂಬಿದೆ.
🚨 𝐂𝐎𝐌𝐁𝐈𝐍𝐀𝐓𝐈𝐎𝐍 𝐋𝐎𝐂𝐊𝐄𝐃 🚨
— Movies Buster (@buster_movies) September 4, 2026
After The 𝐌𝐀𝐒𝐒𝐈𝐕𝐄 𝐒𝐔𝐂𝐂𝐄𝐒𝐒 Of #𝐃𝐡𝐮𝐫𝐚𝐧𝐝𝐡𝐚𝐫 Franchise🔥, Director #𝐀𝐝𝐢𝐭𝐲𝐚𝐃𝐡𝐚𝐫 Is All Set To Collaborate With 𝐀 𝐁𝐈𝐆 𝐏𝐀𝐍-𝐈𝐍𝐃𝐈𝐀 𝐒𝐓𝐀𝐑 😱❤️🔥.
Many Reports Are Circulating That He Is Again… pic.twitter.com/I0RpgQPmNY
ಸೆಟ್ಟೇರಲಿದೆಯಾ ಪ್ಯಾನ್-ಇಂಡಿಯಾ ಸಿನಿಮಾ ?
ಈ ಪೋಸ್ಟ್ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವದಂತಿಯೊಂದು ಕಾಡ್ಗಿಚ್ಚಿನಂತೆ ಹರಡಲು ಪ್ರಾರಂಭಿಸಿದೆ. ಆದಿತ್ಯ ಧರ್ ಮತ್ತು ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್‌ನಲ್ಲಿ ಹೊಸದೊಂದು ಬೃಹತ್ ಪ್ಯಾನ್-ಇಂಡಿಯಾ ಸಿನಿಮಾ ಸೆಟ್ಟೇರಲಿದೆಯೇ ಎಂಬ ಚರ್ಚೆಗಳು ಜೋರಾಗಿವೆ. ಕೆಲವು ನೆಟ್ಟಿಗರು ಇಬ್ಬರ ಮಿಲನವನ್ನು ‘ಧುರಂಧರ್ ಮೀಟ್ಸ್ ಟಾಕ್ಸಿಕ್’ ಎಂದು ಬಣ್ಣಿಸಿದ್ದು, ಇಬ್ಬರೂ ಜೊತೆಯಾಗಿ ದೊಡ್ಡ ಪ್ರಾಜೆಕ್ಟ್ ಮಾಡಬೇಕೆಂದು ಮನವಿ ಮಾಡುತ್ತಿದ್ದಾರೆ. ಇನ್ನು ಕೆಲವರು, ಬಾಲಿವುಡ್‌ನಲ್ಲಿ ಎಲ್ಲರೂ ಮೌನವಾಗಿದ್ದಾಗ ಆದಿತ್ಯ ಧರ್ ಮುಂದೆ ಬಂದು ಯಶ್ ಅವರಿಗೆ ಬೆಂಬಲ ನೀಡಿರುವುದು ಸಣ್ಣ ವಿಷಯವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದಿತ್ಯ ಧರ್ ತಮ್ಮ ಮುಂದಿನ ಸಿನಿಮಾದಲ್ಲಿ ರಣವೀರ್ ಸಿಂಗ್ ಬದಲಿಗೆ ಯಶ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂಬ ವದಂತಿಗಳೂ ಹರಿಡಾಡುತ್ತಿವೆಯಾದರೂ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ.
ಅಂದಹಾಗೆ, ಕಳೆದ ಆಗಸ್ಟ್ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಹಾಗೂ ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಮರ್ಶೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಸಹ, ಈ ಚಿತ್ರವು ವಿಶ್ವದಾದ್ಯಂತ 300 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಸೌಂಡ್ ಮಾಡುತ್ತಿದೆ.
ಇದನ್ನೂ ಓದಿ: ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್ ಮನೆಗೆ ಪುಟ್ಟ ಕೃಷ್ಣನ ಆಗಮನ: ಗಂಡು ಮಗುವಿಗೆ ಜನ್ಮ ನೀಡಿದ ಹರ್ಪಿಕಾ ಪೂಣಚ್ಚ
