TOP NEWS

Anupama Gowda: ಆಂಕರಿಂಗ್ ಜರ್ನಿಗೆ ವಿದಾಯ ಹೇಳಿದ ಅನುಪಮಾ ಗೌಡ: ‘ಇನ್ನು ಸಾಕು’ ಎಂದ ಜನಪ್ರಿಯ ನಿರೂಪಕಿ!

Shock to Fans Popular TV Anchor Anupama Gowda Quits Anchoring Journey

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಮತ್ತು ನಟಿ ಅನುಪಮಾ ಗೌಡ ̈(Anupama Gowda) ತಮ್ಮ 8 ವರ್ಷಗಳ ಸುದೀರ್ಘ ಆಂಕರಿಂಗ್ ವೃತ್ತಿಜೀವನಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಈ ಆಘಾತಕಾರಿ ನಿರ್ಧಾರವನ್ನು ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವಿಶೇಷ ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇಷ್ಟು ವರ್ಷಗಳ ಕಾಲ ತಮ್ಮನ್ನು ಪ್ರೀತಿಯಿಂದ ಬೆಂಬಲಿಸಿದ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿರುವ ಅವರು, ಕೊಂಚ ಬೇಸರದಿಂದಲೇ ನಿರೂಪಣಾ ಪಯಣಕ್ಕೆ ಮುಕ್ತಾಯ ಹಾಡಿದ್ದಾರೆ.

ಎಲ್ಲರಿಗೂ ಧನ್ಯವಾದಗಳು ಎಂದ ಅನುಪಮಾ

ತಮ್ಮ ವೃತ್ತಿಜೀವನದ ಪಯಣವನ್ನು ನೆನಪಿಸಿಕೊಂಡ ಅನುಪಮಾ, “ಕಳೆದ 8 ವರ್ಷಗಳಿಂದ ನನ್ನನ್ನು ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು. ಹೊಸ ಶೋನಲ್ಲಿ ನಾನು ಮುಂದುವರಿಯಬೇಕಿತ್ತು, ಆದರೆ ವಾಹಿನಿಯ ಕೆಲವು ಅನಿರೀಕ್ಷಿತ ನಿರ್ಧಾರಗಳಿಂದಾಗಿ ನಾನು ನಿರ್ಗಮಿಸಬೇಕಾಯಿತು. ಜನರು ‘ಸಾಕಮ್ಮ ನಿನ್ನ ಆಂಕರಿಂಗ್’ ಎಂದು ಹೇಳುವ ಮೊದಲೇ ನಾನೇ ಸ್ವತಃ ಈ ಕೆಲಸವನ್ನು ಕೊನೆಗೊಳಿಸುತ್ತಿದ್ದೇನೆ. ಸೀರಿಯಲ್ ಕ್ಷೇತ್ರಕ್ಕೆ ಮತ್ತೆ ಮರಳುತ್ತೇನೋ ಇಲ್ಲವೋ ಎಂಬುದು ಸದ್ಯಕ್ಕೆ ಸ್ಪಷ್ಟವಿಲ್ಲ” ಎಂದು ಹೇಳಿದ್ದಾರೆ.

ತಮ್ಮನ್ನು ಒಬ್ಬ ಯಶಸ್ವಿ ನಿರೂಪಕಿಯನ್ನಾಗಿ ತಿದ್ದಿ ತೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಪರಮೇಶ್ವರ್ ಗುಂಡ್ಕಲ್ (ಪರಂ ಸರ್) ಅವರಿಗೆ ಅನುಪಮಾ ಕೃತಜ್ಞತೆ ಸಲ್ಲಿಸಿದ್ದಾರೆ. ತಾವು ಇಂದು ಆರ್ಥಿಕವಾಗಿ ಭದ್ರವಾಗಿರಲು ನಟನಾ ಕ್ಷೇತ್ರಕ್ಕಿಂತ ನಿರೂಪಣಾ ವೃತ್ತಿಯೇ ಮುಖ್ಯ ಕಾರಣ ಎಂದಿರುವ ಅವರು, ಆಂಕರಿಂಗ್ ತಮಗೆ ತಂದುಕೊಟ್ಟ ಅಪಾರ ಪ್ರೀತಿ ಮತ್ತು ಯಶಸ್ಸನ್ನು ಸ್ಮರಿಸಿದ್ದಾರೆ.

ಕಠಿಣ ದಿನಗಳನ್ನ ನೆನಸಿಕೊಂಡ ನಿರೂಪಕಿ

ತಮ್ಮ ಜೀವನದ ಕಠಿಣ ಕ್ಷಣವನ್ನು ಹಂಚಿಕೊಂಡ ಅನುಪಮಾ, ‘ಕನ್ನಡ ಕೋಗಿಲೆ’ ಶೋ ನಡೆಸಿಕೊಡುವಾಗ ತಮ್ಮ ತಂದೆ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ಎಷ್ಟೇ ಪ್ರಯತ್ನಿಸಿದರೂ ಶೋ ಮುಗಿಸಿ ಹೋಗಲು ಸಾಧ್ಯವಾಗಿರಲಿಲ್ಲ. ತಂದೆಯ ನಿಧನದ ಕೇವಲ ಮೂರೇ ದಿನಕ್ಕೆ ಮತ್ತೆ ವೇದಿಕೆಗೆ ಮರಳಿ ಕರ್ತವ್ಯ ನಿರ್ವಹಿಸಬೇಕಾದ ಪ್ರಸಂಗ ಎದುರಾಗಿತ್ತು ಎಂದು ಭಾವುಕರಾಗಿದ್ದಾರೆ.

ಯಾವುದೇ ಕೆಲಸವನ್ನಾದರೂ ಆನಂದಿಸುತ್ತಾ ಮಾಡಬೇಕು, ಆದರೆ ಕಳೆದ ಕೆಲವು ತಿಂಗಳುಗಳಿಂದ ನನಗೆ ಆ ತೃಪ್ತಿ ಸಿಗುತ್ತಿರಲಿಲ್ಲ. ಕಳೆದ ವರ್ಷವೇ ಆಂಕರಿಂಗ್ ಬಿಡುವ ಯೋಚನೆ ಇತ್ತಾದರೂ ಮನೆ ಹಾಗೂ ಇತರ ಕೆಲಸಗಳಿಂದ ಮುಂದೂಡಲಾಗಿತ್ತು. ಈ ವರ್ಷದ ಆರಂಭದಲ್ಲೇ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದಿದ್ದಾರೆ. ನಟನೆಯನ್ನು ಸಂಪೂರ್ಣವಾಗಿ ತೊರೆಯುತ್ತಿಲ್ಲ ಎಂದಿರುವ ಅವರು, ವರ್ಷಕ್ಕೆ ಒಂದೊಳ್ಳೆ ಪ್ರಾಜೆಕ್ಟ್ ಸಿಕ್ಕರೂ ಸಾಕು ಎಂದು ಸ್ಪಷ್ಟಪಡಿಸಿದ್ದಾರೆ.

2003ರ ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ್ದ ಅನುಪಮಾ, 2014ರ ‘ಅಕ್ಕ’ ಧಾರಾವಾಹಿಯ ದ್ವಿಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ‘ಮಜಾ ಭಾರತ’, ‘ರಾಜಾ ರಾಣಿ’, ‘ನಮ್ಮಮ್ಮ ಸೂಪರ್ ಸ್ಟಾರ್’, ‘ಸುವರ್ಣ ಸೂಪರ್ ಸ್ಟಾರ್ಸ್’ ಸೇರಿದಂತೆ ಹಲವು ರಿಯಾಲಿಟಿ ಶೋಗಳನ್ನುಶಸ್ವಿಯಾಗಿ ನಡೆಸಿಕೊಟ್ಟಿದ್ದ ಇವರು ಬಿಗ್ ಬಾಸ್ ಸ್ಪರ್ಧಿಯಾಗಿಯೂ ಸದ್ದು ಮಾಡಿದ್ದರು.

ಇದನ್ನೂ ಓದಿ: ತಲೆಬೋಳಿಸಿಕೊಂಡ್ರಾ ನಟಿ ನಯನತಾರಾ? ಏನಿದು ವೈರಲ್‌ ಫೋಟೋ ಸತ್ಯ?

Leave a Reply

Your email address will not be published. Required fields are marked *