Anupama Gowda: ಆಂಕರಿಂಗ್ ಜರ್ನಿಗೆ ವಿದಾಯ ಹೇಳಿದ ಅನುಪಮಾ ಗೌಡ: ‘ಇನ್ನು ಸಾಕು’ ಎಂದ ಜನಪ್ರಿಯ ನಿರೂಪಕಿ!
ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ ಮತ್ತು ನಟಿ ಅನುಪಮಾ ಗೌಡ ̈(Anupama Gowda) ತಮ್ಮ 8 ವರ್ಷಗಳ ಸುದೀರ್ಘ ಆಂಕರಿಂಗ್ ವೃತ್ತಿಜೀವನಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಈ ಆಘಾತಕಾರಿ ನಿರ್ಧಾರವನ್ನು ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವಿಶೇಷ ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇಷ್ಟು ವರ್ಷಗಳ ಕಾಲ ತಮ್ಮನ್ನು ಪ್ರೀತಿಯಿಂದ ಬೆಂಬಲಿಸಿದ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿರುವ ಅವರು, ಕೊಂಚ ಬೇಸರದಿಂದಲೇ ನಿರೂಪಣಾ ಪಯಣಕ್ಕೆ ಮುಕ್ತಾಯ ಹಾಡಿದ್ದಾರೆ. ಎಲ್ಲರಿಗೂ ಧನ್ಯವಾದಗಳು ಎಂದ ಅನುಪಮಾ ತಮ್ಮ ವೃತ್ತಿಜೀವನದ…
