TOP NEWS

Ration Rice: ರೇಷನ್ ಕಾರ್ಡ್ ದಾರರಿಗೆ ಬಂಪರ್ ಕೊಡುಗೆ: ಒಂದೇ ತಿಂಗಳಲ್ಲಿ ಎರಡು ಪಟ್ಟು ಅಕ್ಕಿ ವಿತರಣೆ!

2 months Ration Rice will be distribution on may only

ಬೆಂಗಳೂರು: ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಮೇ ಮತ್ತು ಜೂನ್ ತಿಂಗಳ (Ration Rice) ಪಡಿತರ ಅಕ್ಕಿಯನ್ನು ಒಟ್ಟಿಗೆ ನೀಡಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರದ ಯೋಜನೆಯಡಿ (NFSA) ಹಂಚಿಕೆಯಾಗುವ ಅಕ್ಕಿಯನ್ನು ಮೇ ಮಾಹೆಯಲ್ಲೇ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.

ಯಾವ ಕಾರ್ಡ್‌ಗೆ ಎಷ್ಟು ಅಕ್ಕಿ ಲಭ್ಯ?

  • ಅಂತ್ಯೋದಯ ಪಡಿತರ ಚೀಟಿ: ಈ ಯೋಜನೆಯಡಿ ಬರುವ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ನೀಡುವ 35 ಕೆಜಿಯಂತೆ, ಎರಡು ತಿಂಗಳ ಪಾಲನ್ನು ಒಟ್ಟುಗೂಡಿಸಿ 70 ಕೆಜಿ ಅಕ್ಕಿ ನೀಡಲಾಗುವುದು.
  • ಬಿಪಿಎಲ್ (BPL) ಕಾರ್ಡುದಾರರು: ಪಡಿತರ ಚೀಟಿಯಲ್ಲಿ ಹೆಸರಿರುವ ಪ್ರತಿ ಸದಸ್ಯರಿಗೆ ತಲಾ 5 ಕೆಜಿಯಂತೆ ಹಂಚಿಕೆ ಮಾಡಲಾಗುತ್ತದೆ. ಅದರಂತೆ ಎರಡು ತಿಂಗಳ ಅಕ್ಕಿಯನ್ನು ಸೇರಿಸಿ ಪ್ರತಿ ಸದಸ್ಯರಿಗೆ ಒಟ್ಟು 10 ಕೆಜಿ ಅಕ್ಕಿ ಲಭ್ಯವಾಗಲಿದೆ.

ಬೆರಳು ಮುದ್ರೆ ನೀಡುವುದು ಕಡ್ಡಾಯ: ಎರಡು ತಿಂಗಳ ಪಡಿತರವನ್ನು ಒಂದೇ ಬಾರಿಗೆ ಪಡೆಯುವಾಗ ಗ್ರಾಹಕರು ತಾಂತ್ರಿಕ ಪ್ರಕ್ರಿಯೆಗಾಗಿ ಎರಡು ಬಾರಿ ಬಯೋಮೆಟ್ರಿಕ್ (ಹೆಬ್ಬೆಟ್ಟಿನ ಗುರುತು) ನೀಡುವುದು ಅಗತ್ಯವಾಗಿದೆ. ಎರಡು ಸಲ ಬೆರಳು ಮುದ್ರೆ ನೀಡಿದ ನಂತರವಷ್ಟೇ ಪೂರ್ಣ ಪ್ರಮಾಣದ ಆಹಾರಧಾನ್ಯವನ್ನು ವಿತರಿಸಲು ಸಾಧ್ಯವಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಈ ಯೋಜನೆಯ ಪ್ರಯೋಜನವನ್ನು ಮೇ ತಿಂಗಳಲ್ಲೇ ಪಡೆದುಕೊಳ್ಳುವಂತೆ ಆಹಾರ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯ ಮೂಲಕ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ವಿಜಯ್ ಭರವಸೆಗಳಿಗೆ ಬಜೆಟ್ ಅಡ್ಡಿ; ದೇವರೇ ಕಾಪಾಡಬೇಕು ಎಂದ ಹೆಚ್‌ಡಿಕೆ

Leave a Reply

Your email address will not be published. Required fields are marked *