TOP NEWS

Annu Kapoor: ನಟಿ ತಮನ್ನಾ ಭಾಟಿಯಾ ಕುರಿತ ವಿವಾದಾತ್ಮಕ ಹೇಳಿಕೆ: ಟೀಕೆಗಳಿಗೆ ಅನ್ನು ಕಪೂರ್ ಉತ್ತರ

bollywood actor annu kapoor clarification on his statement about Tamannaah

ಮುಂಬೈ: ನಟಿ ತಮನ್ನಾ ಭಾಟಿಯಾ ಅವರ ಸೌಂದರ್ಯವನ್ನು (Bollywood) ಹೊಗಳಿ ತೀವ್ರ ವಿವಾದಕ್ಕೀಡಾಗಿದ್ದ ನಟ ಅನ್ನು ಕಪೂರ್, (Annu Kapoor) ಇದೀಗ ಆ ಘಟನೆಗೆ ಸಂಬಂಧಿಸಿದಂತೆ ತಮ್ಮ ಮೌನ ಮುರಿದಿದ್ದಾರೆ. ಕಳೆದ ವರ್ಷ ಪಾಡ್‌ಕಾಸ್ಟ್ ಒಂದರಲ್ಲಿ ತಮನ್ನಾ ಅವರ ‘ಆಜ್ ಕಿ ರಾತ್’ ಹಾಡಿನ ಕುರಿತು ಮಾತನಾಡುತ್ತಾ, ಅನ್ನು ಕಪೂರ್ ಬಳಸಿದ್ದ “ದುಧಿಯಾ ಬದನ್” (ಹಾಲು ಬಣ್ಣದ ದೇಹ) ಎಂಬ ಪದಪ್ರಯೋಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ತಮ್ಮ ಹೇಳಿಕೆಯನ್ನು ಅಸಭ್ಯ ಎಂದು ಟ್ರೋಲ್ ಮಾಡಿದ್ದವರ ವಿರುದ್ಧ ಅನ್ನು ಕಪೂರ್ ಈಗ ಸ್ಪಷ್ಟನೆ ನೀಡಿದ್ದಾರೆ.

ನಟಿಯ ಬಗ್ಗೆ ತಪ್ಪು ಆಲೋಚನೆ ಇಲ್ಲ

ಸಂದರ್ಶನವೊಂದರಲ್ಲಿ ಮಾತನಾಡಿದ ಅನ್ನು ಕಪೂರ್, ತಾವು ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾವು ಯಾವುದೇ ಕೆಟ್ಟ ಉದ್ದೇಶದಿಂದ ಅಥವಾ ಕಾಮದಿಂದ ಆ ಮಾತನ್ನು ಆಡಿರಲಿಲ್ಲ, ಬದಲಾಗಿ ಅದು ಸಹಜ ಮೆಚ್ಚುಗೆಯಷ್ಟೇ ಆಗಿತ್ತು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ಇದೇ ಮಾತನ್ನು ಇಂಗ್ಲಿಷ್‌ನಲ್ಲಿ ‘ಮಿಲ್ಕಿ ಬಾಡಿ’ ಎಂದು ಹೇಳಿದ್ದರೆ ಯಾರೂ ಆಕ್ಷೇಪಿಸುತ್ತಿರಲಿಲ್ಲ, ಆದರೆ ಹಿಂದಿಯಲ್ಲಿ ಹೇಳಿದಾಗ ಅದು ದೊಡ್ಡ ವಿವಾದವಾಯಿತು ಎಂದು ಅವರು ತಿಳಿಸಿದ್ದಾರೆ. ತಮನ್ನಾ ತಮ್ಮ ಮಕ್ಕಳ ವಯಸ್ಸಿನವಳಾಗಿದ್ದು, ಅಂತಹ ನಟಿಯ ಬಗ್ಗೆ ತಾವು ತಪ್ಪು ಆಲೋಚನೆ ಮಾಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕ್ಷಮೆಯಾಚಿಸಲು ಸಿದ್ದ

ಅಷ್ಟೇ ಅಲ್ಲದೆ, ಒಂದು ವೇಳೆ ತಮ್ಮ ಮಾತಿನಿಂದ ತಮನ್ನಾ ಭಾಟಿಯಾಗೆ ನೋವಾಗಿದ್ದರೆ, ತಾನು ಖಂಡಿತವಾಗಿಯೂ ಕ್ಷಮೆಯಾಚಿಸುತ್ತೇನೆ ಎಂದು ಅನ್ನು ಕಪೂರ್ ಹೇಳಿದ್ದಾರೆ. ತಮನ್ನಾ ಅವರು ಕೇಳಿದರೆ ತಾವು ಅವರ ಪಾದ ಮುಟ್ಟಿಯಾದರೂ ಕ್ಷಮೆ ಕೇಳಲು ಸಿದ್ಧವಿದ್ದು, 71 ವರ್ಷದ ವ್ಯಕ್ತಿಯಾದ ತಮಗೆ ಅಂತಹ ಕೃತ್ಯದಲ್ಲಿ ಯಾವುದೇ ಮುಜುಗರವಿಲ್ಲ ಎಂದು ತಿಳಿಸಿದ್ದಾರೆ. ತಮ್ಮ ಉದ್ದೇಶ ಕೆಟ್ಟದಾಗಿರಲಿಲ್ಲವಾದ್ದರಿಂದ, ನಟಿ ತಮನ್ನಾ ಅವರು ತಮ್ಮ ಕ್ಷಮೆಯನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ತಮ್ಮದು ಎಂದು ಅವರು ನುಡಿದಿದ್ದಾರೆ. ಅಂದು ಅನ್ನು ಕಪೂರ್ ನೀಡಿದ್ದ ಹೇಳಿಕೆಯನ್ನು ನೆಟ್ಟಿಗರು ಅಸಭ್ಯ ಮತ್ತು ಅತಿರೇಕದ ಮಾತು ಎಂದು ತೀವ್ರವಾಗಿ ಖಂಡಿಸಿದ್ದರು. ಇದೀಗ ನಟನ ಈ ಸ್ಪಷ್ಟನೆಯು ಮತ್ತೆ ಚರ್ಚೆಗೆ ವೇದಿಕೆಯಾಗಿದೆ.

ಇದನ್ನೂ ಓದಿ: ರಾಕಾ ಸಿನಿಮಾದಲ್ಲಿ ಹೊರಬರಲಿದ್ದಾರಾ ದೀಪಿಕಾ? ಇಲ್ಲಿದೆ ಸತ್ಯ

Leave a Reply

Your email address will not be published. Required fields are marked *