IPL: ಚಿನ್ನಸ್ವಾಮಿ ಕ್ರೀಡಾಂಗಣ ಪರಿಶೀಲನೆ ಮಾಡಿದ ತಜ್ಞರ ತಂಡ

IPL inspection in chinnaswamy stadium

ಬೆಂಗಳೂರು : ಐಪಿಎಲ್ (IPL) ಉದ್ಘಾಟನಾ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ, ಸುರಕ್ಷತಾ ಕ್ರಮಗಳ ಕುರಿತು ನಾಳೆ ತಜ್ಞರ ತಂಡವು ಕ್ರೀಡಾಂಗಣದ ಪರಿಶೀಲನೆ ಮಾಡಿದೆ

ಪಂದ್ಯಕ್ಕೆ ಸಕಲ ಸಿದ್ಧತೆ

ಈಗಾಗಲೇ ಕ್ರೀಡಾಂಗಣಕ್ಕೆ ನೂತನ ಪ್ರವೇಶ ದ್ವಾರಗಳನ್ನು ಅಳವಡಿಸಲಾಗಿದ್ದು, ತುರ್ತು ಸಂದರ್ಭಗಳಲ್ಲಿ ಬಳಸಲು ಪ್ರತ್ಯೇಕ ನಿರ್ಗಮನ ಮತ್ತು ಪ್ರವೇಶ ದ್ವಾರಗಳನ್ನು ಸಿದ್ಧಪಡಿಸಲಾಗಿದೆ.  ಕಳೆದ ಪಂದ್ಯವೊಂದರ ಸಂದರ್ಭದಲ್ಲಿ ನಡೆದಿದ್ದ ಕಾಲ್ತುಳಿತದ ಘಟನೆಯ ನಂತರ, ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೇ ಮೊದಲ ಬಾರಿಗೆ ಈ ಕ್ರೀಡಾಂಗಣದಲ್ಲಿ ಕಣಕ್ಕಿಳಿಯುತ್ತಿದೆ. ಹೀಗಾಗಿ ಪ್ರೇಕ್ಷಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.  ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಇದೇ ಮಾರ್ಚ್ 28ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದೊಂದಿಗೆ ತನ್ನ ಅಭಿಯಾನವನ್ನು ಆರಂಭಿಸಲಿದೆ.

ಇದನ್ನೂ ಓದಿ: ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಶುಭಾಶಯ ಕೋರಿದ ನಾಡಿನ ಗಣ್ಯರು

Leave a Reply

Your email address will not be published. Required fields are marked *