ಬೆಳಗಾವಿ: ಇತ್ತೀಚಿಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026ನೇ ಸಾಲಿನ ಬಜೆಟ್ ನಲ್ಲಿ ರಾಜ್ಯದ ತೆರಿಗೆ ಪಾಲಿನಲ್ಲಿ ಕಡಿತಗೊಳಿಸಲಾಗಿಲ್ಲ ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ (V Somanna) ತಿಳಿಸಿದ್ದಾರೆ.
ಹೆಚ್ಚು ನೀಡಲಾಗಿದೆ ಎಂದ ಸಂಸದರು
15ನೆಯ ಹಣಕಾಸಿನ ಆಯೋಗಕ್ಕಿಂತ ಹೆಚ್ಚಿಗೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬೆಳಗಾವಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಇದ್ದ ಶೇಕಡ 3.5 ರಷ್ಟಿದ್ದ ತೆರಿಗೆ ಪಾಲನ್ನು 16ನೇ ಹಣಕಾಸಿನ ಆಯೋಗದಲ್ಲಿ ಶೇಕಡ 4.13 ಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಕೈಮಗ್ಗ, ಕರಕುಶಲ, ಪರಿಸರ ಸ್ನೇಹಿ ಸರಕುಸಾಗಣಿಕೆ, ಮೀನುಗಾರಿಕೆ, ಹಣುಗಾರಿಕೆ, ತೆಂಗು ಉತ್ಪಾದನೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಮಾಧ್ಯಮಿಕ ಶಾಲೆಗಳ ಪ್ರಾರಂಭಿಸಲು ಉದ್ದೇಶ
15 ಸಾವಿರ ಮಾಧ್ಯಮಿಕ ಶಾಲೆಗಳ ಪ್ರಾರಂಭಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದು, ರೈಲ್ವೆ ಅಭಿವೃದ್ಧಿಗೆ 1 ಲಕ್ಷದ 13 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದರಲ್ಲಿ 10 ಸಾವಿರ ರೈಲು ಬೋಗಿಗಳ ಬದಲಾವಣೆ ಮಾಡಲಾಗುತ್ತಿದ್ದು, ಇದಕ್ಕಾಗಿ 65 ಸಾವಿರದ 496 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಸ್ಲೀಪರ್ ಕೋಚ್ ಹೊಂದಿದ ಮೂರು ಹೊಸ ಒಂದೇ ಭಾರತ ರೈಲು ಸಂಚಾರ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ: ಲಕ್ಕುಂಡಿ ಉತ್ಖನನಕ್ಕೆ ಕೇಂದ್ರದ ಸಹಕಾರ, ಸಂಸದ ಗದ್ದಿಗೌಡರ್ ಹೇಳಿದ್ದೇನು?
